ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ನೂರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಶಾಲಾ ಕಟ್ಟಡವೀಗ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ರಸ್ತೆ ಪಕ್ಕದಲ್ಲಿರುವ ಪಾಳು ಬಿದ್ದ ಶಾಲಾ ಕಟ್ಟಡದಿಂದ ರಸ್ತೆಯಲ್ಲಿ ರಾತ್ರಿ ಪಾಳಯದಲ್ಲಿ ಸಂಚರಿಸುವ ಜನರಿಗೆ ಭಯ ಹುಟ್ಟಿಸುವಂತಿದೆ.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಗೇಟ್ ಬಳಿ ಇರುವ ಹಳೇ ಹೈಸ್ಕೂಲ್ ಕಟ್ಟಡ ಇದೀಗ ರಾತ್ರಿ ಪಾಳಯದಲ್ಲಿ ಕುಡುಕರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ ಸಮಯದಲ್ಲಿ ಅರಾಭಿಕೊತ್ತನೂರು ಗೇಟ್ ನಿಂದ ಊರಿನೊಳಗೆ ನಡೆದು ಹೋಗುವ ಮಹಿಳೆಯರು ಆ ಪಾಳುಬಿದ್ದ ಕಟ್ಟಡದ ಪಕ್ಕದಲ್ಲಿಯೇ ಹಾದು ಹೋಗಬೇಕಾಗುತ್ತದೆ, ಪಾಳು ಬಿದ್ದ ಕಟ್ಟಡದೊಳಗೆ ಕುಡಿಕರ ಹಾವಳಿ ಇರುವುದರಿಂದ ಭಯದ ಭೀತಿಯಲ್ಲಿ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಇತಿಹಾಸವಿರುವ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಉತ್ತಮ ಕಟ್ಟಡದೊಂದಿಗೆ ಸುಂದರ ವಾತಾವರಣದಲ್ಲಿ ನಡೆಯುತ್ತಿತ್ತು, ಆದರೆ ಶಾಲಾ ಕಟ್ಟಡದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ನಂತರ ಶಾಲಾ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ಅಧೀನಕ್ಕೆ ಪಡೆದುಕೊಂಡು ಶಾಲೆಗೆ ಪರ್ಯಾಯವಾಗಿ ಹೊಸ ಕಟ್ಟಡವನ್ನು ನಿರ್ಮಿಸಿಕೊಡಲಾಯಿತು. ೨೦೧೬ ರಲ್ಲಿ ಹಳೆ ಕಟ್ಟಡದಲ್ಲಿದ್ದ ಶಾಲೆಯನ್ನು ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಲಾಯಿತು. ಅಂದಿನಿAದ ಹಳೆಯ ಶಾಲಾ ಕಟ್ಟಡದ ನಿರ್ವಹಣೆಯಿಲ್ಲದೆ ಪಾಳು ಬಿದ್ದು ರಾತ್ರಿ ಪಾಳಯದಲ್ಲಿ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ಬಾಕ್ಸ್:
ಶಾಲಾ ಕೂಠಡಿಗಳಿಗೆ ಬಾಗಿಲುಗಳು ಇಲ್ಲದಂತಾಗಿವೆ.ಕೂಠಡಿಗಳಲ್ಲಿ ತ್ಯಾಜ್ಯ ತುಂಬಿದೆ. ಚಿಂದಿ ಹಾಯುವವರು, ಕುಡುಕರು ಹಗಲು ಮತ್ತು ರಾತ್ರಿವೇಳೆ ಅಡ್ಡೆಗಳನ್ನಾಗಿಸಿಕೂಂಡಿದ್ದಾರೆ.ಇನ್ನು ಕೆಲವರು ಅನೈತಿಕ ಚಟುವಟಿಕೆಗಳಿಗೆ ಶಾಲಾ ಕೂಠಡಿಗಳನ್ನು ಬಳಸಿಕೂಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಳೆಯ ಶಾಲಾ ಕಟ್ಟಡವನ್ನು ತಮ್ಮ ಅಧೀನಕ್ಕೆ ಪಡೆದುಕೊಂಡು ಅದನ್ನು ನಿರ್ವಹಣೆ ಮಾಡದೆ ಹಾಗೇ ಬಿಟ್ಟಿರುವುದರಿಂದ ಆ ಶಾಲೆಯ ಕಟ್ಟಡ ಒಂದು ರೀತಿ ಪಾಳುಬಿದ್ದ ಕೊಂಪೆಯಾಗಿದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಶಾಲಾ ಕಟ್ಟಡವನ್ನು ಧ್ವಂಸಗೊಳಿಸಿ ಅದೇ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಿಕೊಟ್ಟರೆ ಅರಾಭಿಕೊತ್ತನೂರು ಗ್ರಾಮ ಸೇರಿದಂತೆ ಪಕ್ಕದ ನಾಲ್ಕು ಗ್ರಾಮಗಳವರು ಇದೇ ಗೇಟ್ ಮೂಲಕ ಬೇರೆ ಕಡೆಗೆ ಹೋಗಬೇಕಾಗುತ್ತದೆ, ಗೇಟ್ ನಲ್ಲಿ ಬಸ್ ಗಳಿಗೆ ಕಾಯುವ ಜನರಿಗೆ ಮಳೆ, ಗಾಳಿ, ಬಿಸಿಲಿಗೆ ಆಸರೆಯಾಗುತ್ತದೆ.
-ಶ್ರೀಧರ್, ಮಾಜಿ ಗ್ರಾ.ಪಂ ಸದಸ್ಯ, ಅರಾಭಿಕೊತ್ತನೂರು.
ನಾವು ಹಳೆಯ ಶಾಲಾ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡಿ ನೂರಾರು ಜನ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿದ್ದೇವೆ, ನಮಗೆ ಆ ಶಾಲಾ ಕಟ್ಟಡ ದೇವಸ್ಥಾನ ಇದ್ದಂತೆ ಆದರೆ ಈಗ ಶಾಲೆಯನ್ನು ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದರಿಂದ ಈ ಹಳೆ ಕಟ್ಟಡ ಅನೈತಿಕಚಟುವಟಿಕೆಗಳ ತಾಣವಾಗಿದೆ, ಪ್ರತಿ ನಿತ್ಯ ಆ ರಸ್ತೆಯಲ್ಲಿ ಓಡಾಡುವಾಗ ಆ ಕಟ್ಟಡವನ್ನು ನೋಡಿ ನಮಗೆ ಬೇಸರವಾಗುತ್ತದೆ, ಸಂಬAಧಪಟ್ಟ ಇಲಾಖೆಗಳು ಈ ಕಟ್ಟಡವನ್ನು ಯಾವುದಾದರೂ ಸಾರ್ವಜನಿಕರ ಉಪಯೋಗಕ್ಕೆ ಬರುವ ರೀತಿ ಮಾಡಲಿ.
-ಮಹೇಶ್ ಕು೩ಮಾರ್, ಹಳೆಯ ವಿದ್ಯಾರ್ಥಿ, ಅರಾಭಿಕೊತ್ತನೂರು.
ಚಿತ್ರ ೦೮ ಕೆ.ಎಲ್.ಆರ್. ೦೧ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಗೇಟ್ ಬಳಿ ಇರುವ ಹಳೇ ಹೈಸ್ಕೂಲ್ ಕಟ್ಟಡ ಇದೀಗ ರಾತ್ರಿ ಪಾಳಯದಲ್ಲಿ ಕುಡುಕರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು.
ಚಿತ್ರ ೦೮ ಕೆ.ಎಲ್.ಆರ್. ೦೧ಎ ಶಾಲಾ ಕೂಠಡಿಗಳಿಗೆ ಬಾಗಿಲುಗಳು ಇಲ್ಲದಂತಾಗಿವೆ. ಕೂಠಡಿಗಳಲ್ಲಿ ತ್ಯಾಜ್ಯ ತುಂಬಿರುವುದು.
ಚಿತ್ರ ೦೮ ಕೆ.ಎಲ್.ಆರ್. ೦೧ಬಿ ಶ್ರೀಧರ್, ಮಾಜಿ ಗ್ರಾ.ಪಂ ಸದಸ್ಯ, ಅರಾಭಿಕೊತ್ತನೂರು.
ಚಿತ್ರ ೦೮ ಕೆ.ಎಲ್.ಆರ್. ೦೧ಸಿ ಮಹೇಶ್ ಕುಮಾರ್, ಹಳೆಯ ವಿದ್ಯಾರ್ಥಿ, ಅರಾಭಿಕೊತ್ತನೂರು.