ನ್ಯೂಸ್

ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕುವೆಂಪು ಪಾರ್ಕ್ / ಪಾರ್ಕಿನಲ್ಲಿ ಯುವಕರ ಪುಂಡಾಟಿಕೆ / ರಾಷ್ಟçಕವಿ ಕುವೆಂಪು ಪುತ್ಥಳಿ ವಿರೂಪ / ವಾಯು ವಿಹಾರಕ್ಕೆ ತೆರಳುವವರಿಗೆ ಕಿರಿಕಿರಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಗರದ ಹೊಸ ಬಸ್‌ನಿಲ್ದಾಣ ಸಮೀಪದ ಅಂತರಗAಗೆ ರಸ್ತೆಯಲ್ಲಿರುವ ಕುವೆಂಪು ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಪಾರ್ಕಿನ ಆವರಣದಲ್ಲಿರುವ ರಾಷ್ಟçಕವಿ ಕುವೆಂಪು ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾರ್ಕಿನ ಆವರಣದಲ್ಲಿ ರಾಷ್ಟçಕವಿ ಕುವೆಂಪು ಹಾಗೂ ವರನಟ ಡಾ.ರಾಜಕುಮಾರ್ ರವರ ಪುತ್ಥಳಿಗಳು ಇದ್ದು, ಇವುಗಳಿಗೆ ಯಾವುದೇ ಭದ್ರತೆ ಇಲ್ಲದಂತೆ ಆಗಿದೆ. ಕುವೆಂಪು ರವರ ಪುತ್ಥಳಿ ವಿರೋಪಗೊಳಿಸಿರುವುದು ಬುಧವಾರ ಸಂಜೆ ಸಾರ್ವಜನಿಕರ ವಲಯದಲ್ಲಿ ಸುದ್ದಿ ಹರಡುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿ ಕೃತ್ಯವನ್ನು ಖಂಡಿಸಿದ್ದಾರೆ.

ಇತ್ತೀಚೆಗೆ ಕುವೆಂಪು ಪಾರ್ಕ್ ನಿರ್ವಹಣೆ ಇಲ್ಲದ ಕಾರಣ ಸಾರ್ವಜನಿಕರು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾರ್ಕ್ ತುಂಬಾ ತುಂಬಿದ್ದು, ಶಾಲಾ ಕಾಲೇಜುಗಳ ಬಿಡುವಿನ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಕಾಲಹರಣ ಮಾಡುವ ಸಲುವಾಗಿ ಬೆಳ್ಳಿಗ್ಗಿನಿಂದ ಸಂಜೆಯ ತನಕವೂ ಪಾರ್ಕಿನಲ್ಲಿಯೇ ಕುಳಿತು ಅಸಭ್ಯ ವರ್ತನೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಬಿಡುವಿನ ವೇಳೆಯಲ್ಲಿ ಸಾರ್ವಜನಿಕರು ಮತ್ತು ವಯೋವೃದ್ಧರು ವಾಯು ವಿಹಾರಕ್ಕಾಗಿ ಪಾರ್ಕಿಗೆ ಬಂದಾಗ ಯುವಕರ ಗುಂಪುಗಳಾಗಿ ಹುಟ್ಟಿದ ಹಬ್ಬದ ದಿನಾಚರಣೆಗಳನ್ನು ಮಾಡಿಕೊಂಡು ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸುವುದರಿಂದ ವಾಯು ವಿಹಾರಕ್ಕಾಗಿ ಬರುವಂತಹ ಸಾರ್ವಜನಿಕರಿಗೆ ಅಸಭ್ಯವಾಗಿ ಕಾಣುವಂತಾಗಿದೆ.

ನಗರದ ಹೃದಯ ಭಾಗದಲ್ಲಿರುವುದರಿಂದ ಬೆಳ್ಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕಾಗಿ ಮಹಿಳೆಯರು, ವಯೋವೃದ್ಧರೂ ಸಹ ಪಾರ್ಕಿನಲ್ಲಿ ವಾಕಿಂಗ್ ಮಾಡಿ ಕುಳಿತು ಹೋಗುತ್ತಾರೆ. ವಿದ್ಯಾರ್ಥಿಗಳು ತಿಂಡಿ ತಿನಿಸುಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದರಿಂದ ವಾಕಿಂಗ್ ಮಾಡುವ ಪಾರ್ಕಿಂಗ್ ಅವ್ಯವಸ್ಥೆಯಿಂದ ಕೂಡಿರುವುದರಿಂದ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ವಚ್ಛತೆ ಇಲ್ಲ :

ಇತ್ತೀಚೆಗೆ ಮಳೆ ಸುರಿಯುತ್ತಿರುವುದರಿಂದ ಪಾರ್ಕ್ನಲ್ಲಿ ನೀರು ತುಂಬಿದ್ದು, ಕೆಸರು ಗದ್ದೆಯಂತೆ ಆಗಿದೆ. ನೀರು ಸರಾಗವಾಗಿ ಹೋಗಲು ಕಾಲುವೆ ವ್ಯವಸ್ಥೆಗಳು ಕಲ್ಪಿಸಿಲ್ಲ. ಪಾರ್ಕ್ ಆವರಣದಲ್ಲಿ ಕುಳಿತುಕೊಳ್ಳಲು ಇರುವ ಕಲ್ಲಿನ ಬೆಂಚುಗಳನ್ನು ಮುರಿದು ಹಾಕಿದ್ದಾರೆ. ಇದರಿಂದ ಆಸನ ವ್ಯವಸ್ಥೆ ಇಲ್ಲದೆ ವಾಯು ವಿಹಾರಕ್ಕೆ ಬರುವವರಿಗೆ ಅವ್ಯವಸ್ಥೆ ಉಂಟಾಗಿದೆ.

ಪಾರ್ಕ್ ಸುತ್ತಲೂ ತಲೆ ಎತ್ತಿರುವ ಅಂಗಡಿಗಳು :

ಪಾರ್ಕಿನ ಸುತ್ತಲೂ ಇರುವ ಚರಂಡಿಯ ಮೇಲೆ ಅಂಗಡಿ ಮತ್ತು ಹೋಟೆಲ್‌ಗಳು ತಲೆ ಎತ್ತಿದ್ದು, ಅವುಗಳಿಂದ ಬೀಳುವ ತ್ಯಾಜ್ಯವನ್ನು ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಚರಂಡಿಯಲ್ಲಿರುವ ನೀರು ಸರಾಗವಾಗಿ ಹೋಗಲು ತ್ಯಾಜ್ಯ ಗಬ್ಬುನಾರುವಂತೆ ಆಗಿದೆ.

ನಿರ್ವಹಣೆಯ ಅಗತ್ಯ :

ನಗರಸಭೆಯವರು ಪಾರ್ಕ್ ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕಾಗಿದೆ. ಬೆಳ್ಳಿಗ್ಗಿಂದ ಸಂಜೆಯ ತನಕ ಸಿಬ್ಬಂದಿಯನ್ನು ನೇಮಿಸಿದ್ದೇ ಆದರೆ ಅಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಬಹುದಾಗಿದೆ.

ಕೋಟ್

ರಾಷ್ಟçಕವಿ ಕುವೆಂಪು ರವರ ಪುತ್ಥಳಿ ವಿರೋಪಗೊಂಡಿಲ್ಲ. ಸ್ವಚ್ಛತೆ ಇಲ್ಲದೆ ಇತ್ತು. ಗುರುವಾರ ಸ್ವಚ್ಛಗೊಳಿಸಲಾಗಿದೆ. ಈ ಹಿಂದೆಯೇ ಸ್ವಲ್ಪ ಮೂಗಿನ ಭಾಗ ವಿರೂಪಗೊಂಡಿದೆ. ಈಗ ವಿರೂಪಗೊಂಡಿಲ್ಲ. ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಮತ್ತು ಕುವೆಂಪು ರವರ ಎರಡು ಪುತ್ಥಳಿಗಳಿಗೆ ಭದ್ರತೆ ನೀಡಲಾಗುವುದು. ನಗರದಲ್ಲಿರುವ ಎಲ್ಲಾ ಪಾರ್ಕ್ಗಳ ನಿರ್ವಹಣೆ ಮಾಡಲು ಸಿಬ್ಭಂದಿಯನ್ನು ನೇಮಿಸಲಾಗಿದೆ. ಅವರುಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು. ಕುವೆಂಪು ಪಾರ್ಕ್ನ್ನು ಸ್ವಚ್ಛಗೊಳಿಸಲಾಗುವುದು. ನೀರು ನಿಲ್ಲದಂತೆ ಕಾಲುವೆ ವ್ಯವಸ್ಥೆ ಮಾಡಲಾಗುವುದು.

-ನವೀನ್‌ಚಂದ್ರ, ಆಯುಕ್ತರು, ನಗರಸಭೆ, ಕೋಲಾರ.

ಚಿತ್ರ ೧೪ ಕೆ.ಎಲ್.ಆರ್. ೦೩ : ಕುವೆಂಪು ಪಾರ್ಕಿನಲ್ಲಿ ಕೆಸರು ಗದ್ದೆಯಾಗಿರುವುದು.

ಚಿತ್ರ ೧೪ ಕೆ.ಎಲ್.ಆರ್. ೦೩ಎ : ಕುವೆಂಪು ಪುತ್ಥಳಿ ವಿರೂಪಗೊಂಡಿರುವುದು.

ಚಿತ್ರ ೧೪ ಕೆ.ಎಲ್.ಆರ್. ೦೩ಬಿ : ನವೀನ್‌ಚಂದ್ರ, ಆಯುಕ್ತರು, ನಗರಸಭೆ, ಕೋಲಾರ ರವರ ಭಾವಚಿತ್ರ