ನ್ಯೂಸ್

ನಿರುದ್ಯೋಗ ನಿವಾರಣೆಗೆ ೨೦೦೦ ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ/ ಜಿ.ಕೆ ವೆಂಕಟಶಿವಾರೆಡ್ಡಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಯುವಜನತೆಯನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ತಾಲೂಕಿನಲ್ಲಿ ೨೦೦೦ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಉದ್ಯೋಗಕ್ಕೆ ಅಧ್ಯತೆ ನೀಡಲಾಗುತ್ತದೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ತಿಳಿಸಿದರು.

ತಾಲೂಕಿನ ಹೋಳೂರು ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಮಹಿಳಾ ಸಮಾಜ ಕಾಲೇಜಿನ ಐದು ದಿನಗಳ ವಾರ್ಷಿಕ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿಧ್ಯಾರ್ಥಿಗಳು ಶಿಕ್ಷಣ ಮುಗಿದ ಮೇಲೆ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವರಿಗೆ ನಿರುದ್ಯೋಗದಿಂದ ಪಾರು ಮಾಡಲು ಕ್ರಮ ವಹಿಸಲಾಗಿದೆ ಎಂದರು.

ವಿಧ್ಯಾರ್ಥಿಗಳ ಜೀವನವು ಬಹಳ ಪ್ರಮುಖ ಘಟ್ಟದಿಂದ ಕೂಡಿದ್ದು, ವಿಧ್ಯಾರ್ಥಿ ದೆಸೆಯಿಂದ ಉತ್ತಮ ನಾಗರೀಕರಾಗುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಉನ್ನತ ಸ್ಥಾನಗಳನ್ನು ಪಡೆಯುವ ಮೂಲಕ ತಾಲೂಕು ಜಿಲ್ಲೆಯ ಕೀರ್ತಿಯನ್ನು ತರಬೇಕು, ಹೋಳೂರು ಹೋಬಳಿ ಕೇಂದ್ರವಾಗಿದ್ದು, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಮನವಿ ನೀಡಿದ್ದು, ಅನುದಾನಕ್ಕೆ ಕೊರತೆಯಿಲ್ಲ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಇನ್ನೂ ಮೂರು ತಿಂಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ನಾನು ಸದಾ ಅಭಿವೃದ್ಧಿಗೆ ಮೊದಲ ಅಧ್ಯತೆ ನೀಡುತ್ತೇನೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಸಮಾಜ ಮುಖ್ಯ ಆಡಳಿತಾಧಿಕಾರಿ ಎಂ.ನವೀನ ಮಾತನಾಡಿ, ಕಾಲೇಜಿನಿಂದ ಐದು ದಿನಗಳ ಕಾಲ ನಡೆದ ಶಿಬಿರವು ವಿಧ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ತಿಳಿಸಿಕೊಡಲಾಗಿದೆ. ಶಿಬಿರಾರ್ಥಿಗಳು ಸಮಯ ಪಾಲನೆ, ಶಿಸ್ತು, ಹೊಂದಿಕೊAಡು ಬದುಕುವ ರೀತಿ, ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿ, ಹೀಗೆ ವ್ಯಕ್ತಿತ್ವ ವಿಕಸನದಂತಹ ಗುಣಗಳನ್ನು ಕಲಿಯುತ್ತೀರಿ ಎಂಬುದು ಕಲಿತಿದ್ದಾರೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದರು.

ಮಾಜಿ ತಾಪಂ ಸದಸ್ಯ ಜಡೇರಿ ಗೋಪಾಲಗೌಡ, ಜೆಡಿಎಸ್ ಮುಖಂಡರಾದ ಜನಪನಹಳ್ಳಿ ಆನಂದ್ ರೆಡ್ಡಿ, ಗಿರೀಶ್, ಸುಧಾಕರ್ ರೆಡ್ಡಿ, ಶಿಕ್ಷಕ ಶರಣಪ್ಪ ಜಮಾದಾರ್, ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಾನ್ ಪಾಷ, ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ನAದನ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮಂಜುನಾಥ್, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಜಿ ಶ್ರೀನಿವಾಸ್ ಮುಂತಾದವರು ಇದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೪ : ಮಹಿಳಾ ಸಮಾಜ ಕಾಲೇಜು ವತಿಯಿಂದ ಹೋಳೂರಿನಲ್ಲಿ ಐದು ದಿನಗಳ ಕಾಲ ಏರ್ಪಡಿಸಲಾಗಿದೆ. ಎನ್.ಎಸ್.ಎಸ್.ಶಿಭಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಕಾಲೇಜು ಆಡಳಿತಾಧಿಕಾರಿ ಎಂ.ನವೀನ, ಜಡೇರಿ ಗೋಪಾಲಗೌಡ ಇದ್ದರು.