ಯುವನಿಧಿ ಉದ್ಘಾಟನೆ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಪ್ರಾಚಾರ್ಯರೊಂದಿಗೆ ಸಭೆ ನಡೆಸಿದರು. ಡಾ.ಆರ್.ಸೆಲ್ಮಮಣಿ, ಜಿ.ಕೆ.ಮಿಥುನ್‌ಕುಮಾರ್, ಸಿದ್ದಲಿಂಗ ರೆಡ್ಡಿ ಇದ್ದರು.  
ನ್ಯೂಸ್

ನಿರುದ್ಯೋಗ ಅಭ್ಯರ್ಥಿಗಳು ಯವನಿಧಿ ಯೋಜನೆ: ಸದುಪಯೋಗ ಪಡೆದುಕೊಳ್ಳಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ``ಯುವ ನಿಧಿ’’ ಕಾರ್ಯಕ್ರಮವು ನಿರುದ್ಯೋಗ ಅಭ್ಯರ್ಥಿಗಳ ಆಶಾಕಿರಣವಾಗಿದ್ದು, ಈ ಯೋಜನೆಯಲ್ಲಿ ಪದವೀಧರರು ಹಾಗೂ ಡಿಪ್ಲೋಮದಾರರ ನಿರುದ್ಯೋಗ ಅಭ್ಯರ್ಥಿಗಳು 2023 ರ ಸಾಲಿನಲ್ಲಿ ತೇರ್ಗಡೆಯಾದಂತಹ ಅಭ್ಯರ್ಥಿಗಳಿಗೆ ಯುವ ನಿಧಿ ಕಾರ್ಯಕ್ರಮದ ಅಡಿಯಲ್ಲಿ ಪದವೀಧರರಿಗೆ ಮಾಸಿಕ 3,000=00 (ಮೂರು ಸಾವಿರ ರೂಪಾಯಿಗಳು ಮಾತ್ರ) ಹಾಗೂ ಡಿಪ್ಲೋಮ ದಾರರುಗಳಿಗೆ ಮಾಸಿಕ 1,500=00 (ಒಂದು ಸಾವಿರದ ಐದು ನೂರು ರೂಪಾಯಿಗಳು)ಗಳನ್ನು ಸರ್ಕಾರದ ವತಿಯಿಂದ ನೀಡುತ್ತಲಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಸಮಸ್ತ ನಿರುದ್ಯೋಗ ಅಭ್ಯರ್ಥಿಗಳು ಪಡೆಯುವಂತೆ ಕೋರಿದೆ.

ಈಗಾಗಲೇ ಅರ್ಜಿ ಸಲ್ಲಿಸಿ ಯುವನಿಧಿ ಯೋಜನೆಯ ಹಣ ಪಡೆಯುತ್ತಿರುವ ಅಭ್ಯರ್ಥಿಗಳು ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಹಣ ಪಡೆಯಬೇಕಾದರೆ ಪ್ರತಿ ಮೂರು ತಿಂಗಳಿಗೊಮ್ಮೆ 25ನೇ ದಿನಾಂಕ ದೊಳಗೆ ಸ್ವಯಂ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಮೂಲಕ ಅಭ್ಯರ್ಥಿಗಳು ಸ್ವಯಂ ಷೋಷಣೆ ಮಾಡಿಕೊಳ್ಳಬೇಕು ಹಾಗೂ ಯುವನಿಧಿ ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಕಡ್ಡಾಯವಾಗಿದೆ ಎಂದು ಜಿಲ್ಲಾ ಊದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರಾದ ಡಿ.ಎಂ ರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.