ನ್ಯೂಸ್

ನಿನ್ನೆ ಒಂದು, ಇವತ್ತು ಇಪ್ಪತ್ತೊಂದು ತಬ್ಲಿಘಿಗಳ ವರದಿ ನೆಗೆಟಿವ್..

ಚಾಮರಾಜನಗರ: ದೆಹಲಿಯ ನಿಜಾಮುದ್ದೀನ್‌‌ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ವಿವಿಧ ತಿಂಗಳಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ 81 ಜನರಲ್ಲಿ ಒಟ್ಟು 22 ತಬ್ಲಿಘಿಗಳ ವರದಿ ನೆಗೆಟಿವ್ ಬಂದಿದೆ.

ನಿಜಾಮುದ್ದೀನ್ ನಂಜು ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಪಟ್ಟಿ ಕಳುಹಿಸಿದ್ದವರಲ್ಲಿ‌ ಗುರುತಿಸಲಾಗಿದ್ದ ಓರ್ವನ ವರದಿ ಏ.7ರಂದು ನೆಗೆಟಿವ್ ಬಂದಿದೆ. ಬುಧವಾರ ರಾಮಾಪುರದ 10, ಚಾಮರಾಜನಗರದ ನಾಗವಳ್ಳಿಯ ಮಸೀದಿಯಲ್ಲಿದ್ದ 12 ಧರ್ಮಪ್ರಚಾರಕರಲ್ಲಿ 11 ಜನರ ವರದಿ ನೆಗೆಟಿವ್ ಬಂದಿದೆ. ಓರ್ವನ ವರದಿಗಾಗಿ ಕಾಯಲಾಗುತ್ತಿದೆ.

ಉಳಿದವರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತೆರೆದಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.