ಶೃಂಗೇರಿ ತಾಪಂನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು. ಇಂದ್ರಜಿತ್ ಹೆಗಡೆ, ದೇವೇಂದ್ರ, ಜಯಮೂರ್ತಿ, ಲಕ್ಷ್ಮೀಶ್, ಕೃಷ್ಣಪ್ಪ, ಸುಹೇಲ್ ಭಾಷಾ ಹಾಗೂ ಅಧಿಕಾರಿಗಳು ಇದ್ದರು.  
ನ್ಯೂಸ್

ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸಿ

ಶೃಂಗೇರಿ: ಕೆಎಸ್‌ಆರ್‌ಟಿಸಿ ಕೆಲವು ಬಸ್‌ಗಳು ಮೆಣಸೆಯ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷ ಕೆ.ಎಸ್.ರಾಜು ಹೇಳಿದರು. ತಾಪಂ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ತಾಲೂಕು ಮಟ್ಟದ ಲಾನುಭವಿಗಳನ್ನು ಒಗ್ಗೂಡಿಸಿ ಮೆಣಸೆ ಅಥವಾ ನೆಮ್ಮಾರಿನಲ್ಲಿ ಶಿಬಿರ ಏರ್ಪಡಿಸಲು ಯೋಜಿಸಲಾಗಿದೆ. ಈ ಕುರಿತು ಸಮಿತಿಯ ಸದಸ್ಯರ ಜತೆ ಸೇರಿ ನಿರ್ಧಾರ ಕೈಗೊಳ್ಳಬೇಕಿದೆ. ಸ್ಥಳ ನಿಗದಿಯಾದ ಬಳಿಕ ನಡೆಯುವ ಶಿಬಿರಕ್ಕೆ ಲಾನುಭವಿಗಳನ್ನು ಕರೆದುಕೊಂಡು ಬರುವ ಜವಾಬ್ದಾರಿ ತಾಪಂ ಇಒ ಸುದೀಪ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮಾಡಬೇಕಿದೆ ಎಂದರು. ಸಭೆಯಲ್ಲಿ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಸಂಬಂಧಿಸಿದ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು. ಸಮಿತಿ ಸದಸ್ಯರಾದ ಚಂದ್ರಮತಿ, ಕಿರಣ್ ಹಾಲಂದೂರು, ಧನಲಕ್ಷ್ಮೀ, ಸುಷ್ಮಾ, ತಾಪಂ ಇಒ ಸುದೀಪ್ ಇದ್ದರು.