ನ್ಯೂಸ್

ನಿಖಿಲ್ ಸೋಲನ್ನು ಈಗ ಸಂಭ್ರಮಿಸುತ್ತಾರಾ

ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಗನ ಸೋಲನ್ನು ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿಯ ಮೂರು ಸೋಲಿಗೆ ಯಾರು ಕಾರಣ? ನಿಖಿಲ್ ಸೋಲನ್ನು ಈಗ ಸಂಭ್ರಮಿಸುತ್ತಾರಾ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದರು.

ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ಆಯೋಜನೆ ವಿಚಾರವಾಗಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನ್ನು ಸಂಭ್ರಮಿಸಲು ಮಂಡ್ಯದಲ್ಲಿ ಜೆಡಿಎಸ್ ಸಮಾವೇಶನ ಮಾಡುತ್ತಾ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಬಾಯಲ್ಲಿ ಸರ್ಕಾರ ತೆಗಿತೀವಿ ಅನ್ನೋ ಮಾತು ಬಂತು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪಲ್ಲವೇ. ಸಿದ್ದರಾಮಯ್ಯ ಗರ್ವ ಮುರೀತೀನಿ ಅನ್ನೋದು ತಪ್ಪಲ್ಲವೇ. ಚನ್ನಪಟ್ಟಣದಲ್ಲಿ 5 ಸಾವಿರ ಅಂತರದಿಅದ ಗೆಲ್ಲುತ್ತಿದ್ದವು. ಆದರೆ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ನಮ್ಮನ್ನು ಬೈದು ಬೈದು 25 ಸಾವಿರ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಿದರು. ಮಂಡ್ಯದಲ್ಲಿ ಎಲ್ಲಿ ಬೇಕಾದರೂ ಸಮಾವೇಶ ಮಾಡಲಿ. ನಾನು ಯಾವತ್ತೂ ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಕುಮಾರಸ್ವಾಮಿ ವೈರಿ ಎಂದು ಸಹ ಹೇಳಿಲ್ಲ. ರಾಜಕೀಯ ಹೇಳಿಕೆಗಳಿಗೆ ಉತ್ತರ ಕೊಟ್ಟಿದ್ದೇನೆ ಅಷ್ಟೇ ಎಂದರು.