ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ಸೋಮವಾರ ಸುದ್ದಿಗಾರರೊಂಗೆ ಮಾತನಾಡಿ, ಈ ವಿಷಯವಾಗಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್‌ಗೆ ಆಸೆ ಅಥವಾ ಉದ್ದೇಶ ಇಲ್ಲ. ಆದರೆ ಜೆಡಿಎಸ್ ಶಾಸಕರಿಗೆ, ಕಾರ್ಯಕರ್ತರಿಗೆ ಇದೆ. ನಿಖಿಲ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡುವುದು ನಮ್ಮ ಕನಸು. ದೇವೇಗೌಡರ ನಂತರ ಕುಮಾರಸ್ವಾಮಿ ಹೇಗೆ ಪಕ್ಷ ಕಟ್ಟಿ ಮುಂದುವರಿಸಿದರೋ, ಅದೇ ರೀತಿ ನಿಖಿಲ್ ಕೂಡ ಮುಂದುವರಿಸುತ್ತಾರೆ. ನಿಖಿಲ್‌ಗೆ ಆ ಶಕ್ತಿ ಇದೆ ಎಂದರು. ಆಗಸ್ಟ್‌ನಲ್ಲಿ ಮೈಸೂರು ಜಿಲ್ಲೆಯಲ್ಲಿ ನಿಖಿಲ್ ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದರು.
ಜಿಟಿಡಿಗೆ ಬೇಸರ ಇರುವುದು ಸತ್ಯ: ನಮ್ಮ ತಂದೆಗೆ ಜೆಡಿಎಸ್ ವಿಚಾರದಲ್ಲಿ ಬೇಸರ ಇರುವುದು ಸತ್ಯ. ಅಸಮಾಧಾನದಿಂದಲೇ ಅವರು ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅವರನ್ನು ಮನವೊಲಿಸುವ ಪ್ರಯತ್ನವನ್ನು ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ. ಆದರೆ ಇದು ನನ್ನ ಮನೆಯ ವೈಯಕ್ತಿಕ ವಿಚಾರ ಅಲ್ಲ, ಹೀಗಾಗಿ ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದರು.
ನಾನು ಜೆಡಿಎಸ್‌ನಿಂದ ಶಾಸಕನಾಗಿದ್ದೇನೆ, ಜೆಡಿಎಸ್‌ನಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಜನ ನನ್ನನ್ನು ಜೆಡಿಎಸ್‌ನಿಂದ ಶಾಸಕನನ್ನಾಗಿ ಗೆಲ್ಲಿಸಿದ್ದಾರೆ. ಜನರ ನಂಬಿಕೆಗೆ ದ್ರೋಹ ಮಾಡುವುದಿಲ್ಲ ಎಂದರು.