ಬೆಟ್ಟದಪುರ: ಮಕ್ಕಳು ಹುಟ್ಟಿದ ಬಳಿಕ ಶಾಲೆ ಬಾಗಿಲು ನೋಡುವ ಮೊದಲು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುವರು. ಮಕ್ಕಳ ವಿಚಾರದಲ್ಲಿ ನಾವು ಮಾಡುವ ಸೇವೆ ಸದಾ ಚಿರಋಣಿಯಾಗಿರುತ್ತದೆ ಎಂದು ಸಿಡಿಪಿಒ ಮಮತಾ ಹೇಳಿದರು.
ಬೆಟ್ಟದಪುರ ಸಮೀಪದ ರಾಜನಬಿಳಗೂಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಪಾಲಕರಂತೆ ಮಕ್ಕಳನ್ನು ಬೆಳೆಸುವ ಮೂಲಕ ಅವರ ಭವಿಷ್ಯದ ಸಾಧನೆಗೆ ದಾರಿಯಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಪುಟಾಣಿ ಮಕ್ಕಳ ಆರೋಗ್ಯ, ಊಟ, ಆಟೋಟಗಳ ಜತೆಗೆ ಅವರ ಕ್ಷೇಮ ನೋಡಿಕೊಳ್ಳುವುದು ಕೂಡ ಒಂದು ಪ್ರಮುಖ ಸೇವೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಬಿ ಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ರತ್ಮಮ್ಮ, ಮೂಡಲಕೊಪ್ಪಲು ಅಂಗನವಾಡಿ ಕೇಂದ್ರದ ಸಹಾಯಕಿ ಪಾರ್ವತಮ್ಮ ಅವರು ಸೇವೆಯಿಂದ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬಿಳ್ಕೋಡುಗೆ ನೀಡಲಾಯಿತು. ಇದೇ ವೇಳೆ ಸಿಡಿಪಿಒ ಮಮತಾ ಹಾಗೂ ಮೇಲ್ವಿಚಾರಕಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇದ್ದರು.