ನ್ಯೂಸ್

ನಾಳೆ ನೇತಾಜಿ ಜಯಂತಿ ಆಚರಣೆ - ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಝಿರಲಿ ಮಾಹಿತಿ

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಕಣಬರ್ಗಿ ರಸ್ತೆಯಲ್ಲಿರುವ ನೇತಾಜಿ ಸುಭಾಷಚಂದ್ರ ಬೋಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಸಭಾಂಗಣದಲ್ಲಿ ಜ.23ರಂದು ನೇತಾಜಿ ಸುಭಾಷಚಂದ್ರ ಬೋಸ್ 127ನೇ ಜಯಂತಿ ಹಾಗೂ ಸ್ವಾತಂತ್ರೃಅಮೃತ ಮಹೋತ್ಸವ ಜರುಗಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಝಿರಲಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತಾಜಿ ಸುಭಾಷಚಂದ್ರ ಬೋಸ್ 127ನೇ ಜಯಂತಿ, ಅಮೃತ ಮಹೋತ್ಸವ ಸಮಾರಂಭವನ್ನು ಇಂಧನ ಸಚಿವ ವಿ.ಸುನೀಲಕುಮಾರ ಉದ್ಘಾಟಿಸಲಿದ್ದಾರೆ. ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಪ್ರಮುಖ ರಾಘವೇಂದ್ರ ಕಾಗವಾಡ, ಶಾಸಕ ಅನಿಲ ಬೆನಕೆ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಾವಯವ ಸೇರಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೈತರು ಮತ್ತು ರೈತ ಮಹಿಳೆಯರನ್ನು ಪ್ರೋತ್ಸಾಹಿಸಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಅಲ್ಲದೆ, ವೀರಯೋಧರಿಗೆ, ವಾರಕರಿ ಸಂಪ್ರದಾಯ ಸಂತ್ರರಿಗೆ ಗೌರವ ಸನ್ಮಾನ ಮಾಡಲಾಗುತ್ತಿದೆ ಎಂದು ವಿವರಿಸಿದರು. ಶ್ರೀಕಾಂತ ಕೊರಡೆ, ಸುನೀಲ ತುಬಚಿ, ಎಸ್.ಸಾವಂತ ಇತರರಿದ್ದರು.