ಆಲ್ದೂರು: ಬಹುಜನ ಸಮಾಜ ಪಾರ್ಟಿ ಆಲ್ದೂರು ಬ್ಲಾಕ್‌ನಿಂದ ಪಟ್ಟಣದ ರೈಸ್‌ಮಿಲ್ ರಸ್ತೆಯ ಜೈಭೀಮ್ ಸಮುದಾಯ ಭವನದಲ್ಲಿ ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ 140ನೇ ಪರಿನಿಬ್ಬಾಣ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಲ್ದೂರು ಬ್ಲಾಕ್ ಸಮಿತಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬಿ.ಧರ್ಮೇಶ್, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಪರಮೇಶ್ವರ್, ವಿಧಾನಸಭಾ ಕ್ಷೇತ್ರ ಉಸ್ತುವಾರಿ ಸಿ.ಪಿ.ವಸಂತ್‌ಕುಮಾರ್, ಸಂಯೋಜಕ ಎಂ.ಡಿ.ಶರತ್, ಜಿಲ್ಲಾ ಉಪಾಧ್ಯಕ್ಷ ಎಂ.ಬಾಬಣ್ಣ, ಹಿರಿಯ ಮುಖಂಡರಾದ ಎಂ.ಕೆ.ಮಂಜುನಾಥ್, ಸುಂದರ್, ಪರಮೇಶ್, ಆಲ್ದೂರು ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್, ವಸ್ತಾರೆ ಹೋಬಳಿ ಅಧ್ಯಕ್ಷ ರಾಜು, ಬ್ಲಾಕ್ ಉಸ್ತುವಾರಿ ನಾರಾಯಣ, ಗ್ರಾಪಂ ಸದಸ್ಯ ಗಿರೀಶ್ ಹವ್ವಳ್ಳಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ರಾಜಕೀಯ ಪಕ್ಷ ತೊರೆದು 20ಕ್ಕೂ ಹೆಚ್ಚು ಕಾರ್ಯಕರ್ತರು ಬಿಎಸ್‌ಪಿ ಸೇರ್ಪಡೆಗೊಂಡರು.