:ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಜೇಸಿ ಸಪ್ತಾಹದ ಸಮಾರೋಪದಲ್ಲಿ ಕಲಾವಿದ ಹರೀಶ್ ಕುಟ್ಟಿ ಮಾತನಾಡಿದರು. ಅಜಿತ್, ರಚನ್, ನಿಖಿಲ್ ಇದ್ದರು.  
ನ್ಯೂಸ್

ನಾಯಕತ್ವದ ಗುಣ ಬೆಳೆಸುವ ಜೇಸಿಐ

ಬಾಳೆಹೊನ್ನೂರು: ಜೇಸಿಐ ಯುವಕರಲ್ಲಿ ನಾಯಕತ್ವ ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಕಲಾವಿದ ಹರೀಶ್ ಕುಟ್ಟಿ ಹೇಳಿದರು·
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಜೇಸಿ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ವಿವಿಧ ತರಬೇತಿಗಳನ್ನು ನೀಡುವ ಮೂಲಕ ಜೇಸಿ ಸಂಸ್ಥೆ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿದೆ. ಯುವಕರು ಉತ್ತಮ ವ್ಯಾಪಾರ ವಹಿವಾಟುಗಳನ್ನು ನಡೆಸಲು ಉದ್ಯೋಗದಲ್ಲಿ ತೊಡಗಿಕೊಳ್ಳಲು, ಸಮಾಜಮುಖಿ ಕಾರ್ಯ ನಡೆಸಲು ಜೇಸಿ ಸಂಸ್ಥೆ ಪ್ರೇರೇಪಣೆ ನೀಡಲಿದೆ ಎಂದು ಹೇಳಿದರು.
ಜೇಸಿ ಅಧ್ಯಕ್ಷ ಬಿ.ಎಸ್.ಅಜಿತ್ ಮಾತನಾಡಿ, ಜೇಸಿ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂ