ಬೆಂಗಳೂರು: ಕರೊನಾ ತಗ್ಗುತ್ತಿದ್ದಂತೆ ರಂಗ ಚಟುವಟಿಕೆ ಚುರುಕುಗೊಳ್ಳುತ್ತಿದೆ. ವಿವಿಧ ರಂಗ ತಂಡಗಳು ಹೊಸ ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಿವೆ.
ಅಂತರಂಗ ತಂಡ ಪ್ರಸ್ತುತಪಡಿಸುವ ಎರಡು ದಿನಗಳ ಬಡಾವಣೆ ರಂಗೋತ್ಸವ ಮಾರ್ಚ್ 12 ಹಾಗೂ 13ರಂದು ಜೆ.ಪಿ.ನಗರ 3ನೇ ಹಂತದಲ್ಲಿರುವ ವ್ಯೋಮ ಆರ್ಟ್ ಸ್ಪೇಸ್ ಅಂಡ್ ಸ್ಟೂಡಿಯೋ ಥಿಯೇಟರ್‌ನಲ್ಲಿ ನಡೆಯಲಿದೆ.
12ರಂದು ಸಂಜೆ 7ಕ್ಕೆ ಅಂಕಣಕಾರ ಹಾಗೂ ಗೀತಸಾಹಿತಿ ಎನ್. ರಾಮನಾಥ್ ಅವರು ನಾಟಕೋತ್ಸವ ಉದ್ಘಾಟಿಸಲಿದ್ದು, ಸಂಜೆ 7:30ಕ್ಕೆ ಪ್ರವರ ಥಿಯೇಟರ್ ತಂಡದಿಂದ ಖ್ಯಾತ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ರಚಿಸಿರುವ ಹಾಸ್ಯ ನಾಟಕ 'Beg Borrow ಅಳಿಯ' ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹನು ರಾಮಸಂಜೀವ್ ನಿರ್ದೇಶನ ಮಾಡಿದ್ದಾರೆ.
13ರಂದು ಸಂಜೆ 7ಕ್ಕೆ ಸೈಡ್ ವಿಂಗ್ ಥಿಯೇಟರ್ ತಂಡದಿಂದ (SIDE WING - R) ವಿಭಿನ್ನ ನಾಟಕ 'ಇಲ್ಲ.. ಅಂದ್ರೆ...ಇದೆ' ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಚನೆ ಹಾಗೂ ನಿರ್ದೇಶನ ಶೈಲೇಶ್ ಕುಮಾರ್