ಕಳಸ: ತಾಲೂಕಿನ ಮರಸಣಿಗೆ ಗ್ರಾಮದ ಯಡೂರು ನಾಗಲಮ್ಮ ದೇವಸ್ಥಾನದ ಬಾಗಿಲು ಹೊಡೆದು ಕಳ್ಳರು ಕಳ್ಳತನ ಮಾಡಿದ್ದಾರೆ. ಸೋಮವಾರ ರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಬಂಗಾರದ ಮೂಗುತ್ತಿ, ಕಿವಿಯೋಲೆ, ತಾಳಿಸರ, ಕಾಣಿಕೆಹುಂಡಿ ಕಳವು ಮಾಡಿ ಪರಾರಿಯಾಗಿದ್ದಾರೆ. ಕಳಸ ಪೊಲೀಸ್ ಠಾಣಾಧಿಕಾರಿ ಭರಮಪ್ಪ ಬೆಳಗಲಿ ಮತ್ತು ಪಿಎಸ್‌ಐ ಬಾಬು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.