????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ನ್ಯೂಸ್

ನವನಗರ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ವಾರ್ಷಿಕ ಮಹಾಸಭೆ

ಮೈಸೂರು : ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈ ಸಾಲಿನಲ್ಲಿ 2.36 ಕೋಟಿ ರೂ. ಸಾಲ ನೀಡಿದ್ದು 2.5 ಕೋಟಿ ರೂ.ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನ 2021-2022 ನೇ ಸಾಲಿನ 25ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈ ಸಾಲಿನಲ್ಲಿ ನಮ್ಮ ಬ್ಯಾಂಕ್ 8.89 ಕೋಟಿ ರೂ. ಬಂಡವಾಳ ಹೊಂದಿದ್ದು, 29.37 ಕೋಟಿ ರೂ.ಕಾಯ್ದಿಟ್ಟ ನಿಧಿ ಹಾಗೂ ಇತರೆ ನಿಧಿಗಳನ್ನು ಹೊಂದಿದೆ. 2.36 ಕೋಟಿ ರೂ. ಸಾಲಗಳು ಹಾಗೂ 108.35 ಕೋಟಿ ರೂ.ಹೂಡಿಕೆ ಮಾಡಿ ಬ್ಯಾಂಕು ತನ್ನ ವ್ಯವಹಾರವನ್ನು ವೃದ್ಧಿಸಿಕೊಂಡಿದೆ ಎಂದರು.


ಪ್ರಸಕ್ತ ಸಾಲಿನಲ್ಲಿ ಉತ್ತಮ ಸಾಲಗಾರರು ದೊರೆಯದ ಕಾರಣ ಹೂಡಿಕೆಯನ್ನು ಹೆಚ್ಚಿಗೆ ಮಾಡಲಾಗಿದೆ, ಅದೇ ರೀತಿ ಬ್ಯಾಂಕ್ ಈ ಸಾಲಿನಲ್ಲಿ 34.03 ಕೋಟಿ ರೂ.ಆದಾಯಗಳಿಸಿದ್ದು ಕಳೆದ ವರ್ಷಕ್ಕಿಂತ 1.73 ಕೋಟಿ ರೂ.ಆದಾಯ ವೃದ್ಧಿಯಾಗಿರುತ್ತದೆ. 2.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.


ಹೂಟಗಳ್ಳಿ ಶಾಖೆಗೆ ಸ್ವಂತಕಟ್ಟಡ ಹೊಂದಲು ಮೈಸೂರು ಮುಡಾ ದಿಂದ ಸಿಎ ನಿವೇಶನಕ್ಕೆ ಈಗಾಗಲೇ ಅರ್ಜಿಹಾಕಿ ಮುಂಗಡ ಹಣ ಪಾವತಿಸಿದೆ ಮತ್ತು ಹುಣಸೂರು ಶಾಖೆಗೆ ಸ್ವಂತ ಕಟ್ಟಡ ಹೊಂದುವ ಉದ್ದೇಶದಿಂದ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದಿಂದ 25 ವರ್ಷ ಬಾಡಿಗೆ ಆಧಾರದ ಮೇರೆಗೆ ಕಟ್ಟಡ ನಿರ್ಮಿಸಿಕೊಳ್ಳಲು ಮಾತುಕತೆ ಆರಂಭವಾಗಿರುತ್ತದೆ ಎಂದರು.


ನಾವು ಸುಸ್ತಿದಾರರಿಗೆ ತೆಗೆದುಕೊಂಡಿರುವ ಕಾನೂನು ಕ್ರಮಗಳಂತೆ 39.50 ಕೋಟಿ ರೂ. ಸಾಲದಲ್ಲಿ 25 ದೊಡ್ಡ ಪ್ರಮಾಣದ ಸಾಲಗಳ ಪೈಕಿ 3 ಸಾಲಗಳ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಂಡಿದ್ದೇವೆ. 6 ಸಾಲಗಳ ಆಸ್ತಿಯನ್ನು ಬ್ಯಾಂಕಿನ ಸುಫರ್ದಿಗೆ ಪಡೆಯಲು ಜಿಲ್ಲಾಧಿಕಾರಿಗಳಿಂದ ಆದೇಶ ಪಡೆಯಲಾಗಿದೆ. ಉಳಿದ ಸಾಲಗಳಿಗೆ ಮೊದಲನೇ ಮತ್ತು ಎರಡನೇ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.


2021-22ನೇ ಸಾಲಿನ ಲಾಭ ವಿಲೇವಾರಿಯನ್ನು ವಾರ್ಷಿಕ ಮಹಾಸಭೆಯಲ್ಲಿ ನಿಧಿವಾರು ಹಂಚಿಕೆ ಮಾಡಿಕೊಂಡು ಉಳಿದ ಲಾಭವನ್ನು ಸದಸ್ಯರಿಗೆ ಡಿವಿಡೆಂಡ್ ನೀಡುವಂತೆ ಸರ್ವ ಸದಸ್ಯರ ತೀರ್ಮಾನ ಪಡೆದು ಆರ್‌ಬಿಐ ನ ಅನುಮತಿ ಪಡೆದು ಪಾವತಿಸಲಾಗುವುದು. ಎಂದಿನಂತೆ ಕಳೆದ ವರ್ಷದ ರೀತಿಯಲ್ಲಿ ಸದಸ್ಯರಿಗೆ ಉಡುಗೊರೆ, ಕೂಪನ್ ನೀಡಲಾಗುತ್ತದೆ ಎಂದು ತಿಳಿಸಿದರು.

ಎನ್‌ಪಿಎ ಪ್ರಮಾಣ ಕಡಿಮೆ ಮಾಡಲು ಪ್ರಯತ್ನ :

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೆಶಕ ಸಿ.ಸುರೇಶ್ ಮಾತನಾಡಿ ಎನ್‌ಪಿಎ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು. ಠೇವಣಿಗಳನ್ನು ಹಾಲಿ 328 ಕೋಟಿ ರೂ.ಗಳಿಂದ 350 ಕೋಟಿ ರೂ.ಗಳಿಗೆ. ಸಾಲಗಳ ಬಾಕಿ 235 ಕೋಟಿ ರೂ.ಗಳಿಂದ 260 ಕೋಟಿ ರೂ. ವರಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ವ್ಯವಹಾರವನ್ನು 563 ಕೋಟಿ ರೂ. ಗಳಿಂದ 610 ಕೋಟಿ ರೂ. ಗಳಿಗೆ ವೃದ್ಧಿಸಿಕೊಂಡು ಸಿಬ್ಬಂದಿಗಳಿಗೆ ಬ್ಯಾಂಕಿನ ವ್ಯವಹಾರಗಳಿಗೆ ತಕ್ಕಂತೆ ಹೆಚ್ಚಿನ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.


ಸಭೆಯಲ್ಲಿ ಸದಸ್ಯರಾದ ಲೋಕನಾಥ್, ಸುದರ್ಶನ್, ಜವರೇಗೌಡ, ವೆಂಕಟೇಶ ಸೇರಿದಂತೆ ಇನ್ನಿತರರು ಮಾತನಾಡಿ, ಬ್ಯಾಂಕ್‌ನ ಆರ್ಥಿಕ ಅಭಿವೃದ್ಧಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಷೇರುದಾರ ಸದಸ್ಯರ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಬ್ಯಾಂಕ್ ಉಪಾಧ್ಯಕ್ಷೆ ಸರೋಜಾ ನಾರಾಯಣ್, ನಿರ್ದೇಶಕರಾದ ವಿಜಯಕುಮಾರ್, ಎಂ.ಕೆ.ಮಹದೇವ್, ಕೇಶವ್, ವೈ.ಎಸ್.ಕುಮಾರ್, ಅಪ್ಸರ್ ಬಾಬು, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಚಂದ್ರಕುಮಾರ್, ಕೆ.ಎನ್.ರಮೇಶ್‌ರಾವ್, ಸುಬ್ಬನಾಯಕ್, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎನ್.ಎಸ್.ವಿಶ್ವನಾಥ್, ವಿ.ಶ್ರೀನಿವಾಸ್ ಮೂರ್ತಿ ಸೇರಿದಂತೆ ಬ್ಯಾಂಕ್‌ನ ಸಿಬ್ಬಂದಿ ಹಾಜರಿದ್ದರು.