ನ್ಯೂಸ್

ನವದಂಪತಿಗೆ ಪೊಲೀಸರ ಶುಭಾಶಯ; ಇದು ಚಿತ್ರ ವಿ-ಚಿತ್ರ ದುನಿಯಾ

ನವದೆಹಲಿ: ಲಾಕ್​ಡೌನ್ ಕಾರಣಕ್ಕೆ ಮದುವೆ, ಉತ್ಸವ, ಹಬ್ಬಗಳನ್ನೆಲ್ಲ ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಆದರೂ ಎಷ್ಟೋ ಜನ ಈ ವೇಳೆ ಸರಳ ವಿವಾಹವಾಗುತ್ತಿದ್ದಾರೆ.

ಪಂಜಾಬ್​ನಲ್ಲಿ ಹೀಗೆ ಸರಳವಾಗಿ ದೇವಾಲಯದಲ್ಲಿ ವಿವಾಹವಾದ ದಂಪತಿ ಬೈಕ್​ನಲ್ಲಿ ಮನೆಯತ್ತ ಹೊರಟಿದ್ದರು. ಅವರನ್ನು ಕಂಡ ಪೊಲೀಸರು ಬೈಕ್ ನಿಲ್ಲಿಸಿ ಪರಿಶೀಲಿಸಿದ್ದಲ್ಲದೆ, ಲಾಕ್​ಡೌನ್ ಅವಧಿಯಲ್ಲಿ ಮನೆಯಿಂದ ಹೊರಬಂದ ಕಾರಣ ಕೇಳಿದರು. ಅದಕ್ಕೆ ಅವರು ನಗರಪಾಲಿಕೆಯಿಂದ ಅಗತ್ಯವಾದ ಅನುಮತಿ ಪಡೆದು ದೇವಾಲಯದಲ್ಲಿ ವಿವಾಹವಾಗಿ ಮನೆಗೆ ಹಿಂದಿರುಗುತ್ತಿರುವುದಾಗಿ ತಿಳಿಸಿದರು.

ಇದನ್ನು ಕೇಳಿದ ಪೊಲೀಸರು ಹೂವು ಹಾಗೂ ಸಿಹಿ ನೀಡಿ ಶುಭಾಶಯ ಕೋರಿದ ವಿಡಿಯೋ ವೈರಲ್ ಆಗಿದೆ. ಈ ಮದುವೆಯಲ್ಲಿ ಐವರಷ್ಟೇ ಪಾಲ್ಗೊಂಡಿದ್ದರು.