ನ್ಯೂಸ್

ನರೇಗಾ ತಾಂತ್ರಿಕ ಸಹಾಯಕ ಕರ್ತವ್ಯದಿಂದ ಬಿಡುಗಡೆ

ಚಿತ್ರದುರ್ಗ:ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಹಿರಿಯೂರು ತಾಲೂಕು ಧರ್ಮಪುರ ಗ್ರಾಪಂ ವ್ಯಾಪ್ತಿಯಲ್ಲಿ ಕರ್ತವ್ಯ ನಿ ರ್ವಹಿಸುತ್ತಿರುವ ತಾಂತ್ರಿಕ ಸಹಾಯಕ ವಿಜಯೇಂದ್ರರನ್ನು,ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಕರ್ತವ್ಯದಿಂದ ಬಿಡುಗಡೆಗೊಳಿಸಿ ದ್ದಾರೆ. ವಿಜಯೇಂದ್ರ ಅವರು,ಕಾಮಗಾರಿಗಳ ದಾಖಲೆ ನಿರ್ವಹಣೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಹಿರಿಯೂರು ತಾಪಂ ಇಒ ವರದಿ ನೀಡಿರುತ್ತಾರೆ. 3 ಲಕ್ಷ ರೂ.ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ 12 ಸಾವಿರ ರೂ.ಕೊಡುವಂತೆ ವಿಜಯೇಂದ್ರ ಬೇಡಿಕೆ ಇಟ್ಟಿ ದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ನರೇಗಾ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿರುವ ವಿಜಯೇ ಂದ್ರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.