ವಿಜಯವಾಣಿ ಸುದ್ದಿಜಾಲ ಕೋಲಾರ
ಮುಂದಿನ ಆರು ತಿಂಗಳೊಳಗೆ ಕಂಪನಿಯ ಎರಡನೇ ಶಾಖೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಏಳನೇ ತಿಂಗಳಲ್ಲೇ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ನೀಡುವ ಕೆಲಸವಾಗಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಮಹೇಂದ್ರ ಏರೋಸ್ಪೇಸ್ ಕಂಪನಿಯ ಎರಡನೇ ಶಾಖೆಯ ಶಂಕುಸ್ಥಾಪನೆಯಲ್ಲಿ ಭಾಗವಹಿಸಿ ಮಾತನಾಡಿ, ಕೋಲಾರ ಜಿಲ್ಲೆಯ ಜನತೆಗೆ ಉದ್ಯೋಗ ಅವಕಾಶಗಳು ದೊರೆಯುವಂತೆ ಮಾಡುವುದು ಕಂಪನಿಗಳ ಜವಾಬ್ದಾರಿಯಾಗಬೇಕು. ಯಾವುದೇ ಕೆಲಸವಾಗಲಿ ಜಿಲ್ಲೆಯವರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಸ್ಥಳೀಯವಾಗಿರುವ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಕೇವಲ ೧೧ ತಿಂಗಳು ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ದುಡಿಸಿ ಕೊಳ್ಳತ್ತಾರೆ. ನಂತರ ಕಂಪನಿಯಿAದ ಹೊರ ಕಳಿಸಲಾಗುತ್ತಿದೆ. ಇದರ ಬಗ್ಗೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಒಗ್ಗಟ್ಟಿನನಿಂದ ಕೆಲವು ನಿಯಮಗಳನ್ನು ಜಾರಿಗೆ ತಂದು ಸ್ಥಳೀಯರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು. ಸಣ್ಣಪ್ರಮಾಣದ ಕೆಲಸಗಳು ಸ್ಥಳೀಯರಿಗೆ ದೊಡ್ಡ ಕೆಲಸಗಳು ಹೊರಗಿನವರಿಗೆ ಎಂಬುದನ್ನು ಸರಿಪಡಿಸಬೇಕಾಗಿದೆ ಎಂದರು.
ಸAಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ನಿರಂತರವಾಗಿ ಕಾರ್ಮಿಕರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ದೂರುಗಳು ನನ್ನ ಗಮನಕ್ಕೆ ಬಂದಿವೆ. ಕೂಡಲೇ ಸರಿಪಡಿಸಿಕೊಳ್ಳಬೇಕು. ಮುಂದೆ ಏನಾದರೊಂದು ದೂರು ಬಂದರೂ ಸಂಸತ್ತಿನಲ್ಲಿ ಚರ್ಚೆ ಮಾಡಲಾಗುತ್ತದೆ. ಜೊತೆಗೆ ಕ್ರಮಕ್ಕೆ ಆದೇಶವನ್ನು ಮಾಡಲಾಗುತ್ತದೆ ಎಂದು ಹೆಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕೈಗಾರಿಕಾ ಪ್ರದೇಶದ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ. ಮುಂದೆ ಈ ಭಾಗದಲ್ಲಿ ಬೃಹತ್ ಕಾಮಗಾರಿಯ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ಇದ್ದು, ಆದಷ್ಟು ಬೇಗ ರಸ್ತೆ ಆಗುತ್ತದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಕ್ರಮವಹಿಸಲಾಗುತ್ತದೆ ಎಂದರು.
ಎAಎಲ್ಸಿ ಇಂಚರ ಗೋವಿಂದರಾಜು, ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಮಮತ, ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ಹಾಲಿ ಸದಸ್ಯರಾದ ಸಂತೋಷ ಕುಮಾರ್, ರಘುಪತಿ, ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಮಹೇಂದ್ರ ಏರೋಸ್ಪೇಸ್ ಕಂಪನಿ ಮುಖ್ಯಸ್ಥ ಡಾ ಕಾರ್ತಿಕ್ ಕೃಷ್ಣಮೂರ್ತಿ, ಕಾರ್ಖಾನೆಯ ಮುಖ್ಯಸ್ಥ ಆಶೀಶ್ ಮಹಾಲೆ, ಮಾನವ ಸಂಪನ್ಮೂಲ ಮುಖ್ಯಸ್ಥ ನಾಗರಾಜ, ಡಿಬಿ ಪ್ರಾಜೆಕ್ಟ್ ಮುಖ್ಯಸ್ಥ ಟಿ.ಎಂ ರೇಣುಕಾಸ್ವಾಮಿ, ಪ್ರದೀಪ್, ಶ್ರೀರಾಮ್, ನಾಗೇಶ್ ಹಾಗೂ ಕಂಪನಿಯ ಸಹೋದ್ಯೋಗಿಗಳು ಇದ್ದರು.
ಚಿತ್ರ ೧೯ ಕೆ.ಎಲ್.ಆರ್. ೦೩ : ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಮಹೇಂದ್ರ ಏರೋಸ್ಪೇಸ್ ಕಂಪನಿಯ ಎರಡನೇ ಶಾಖೆಯ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಕೊತ್ತೂರು ಮಂಜುನಾಥ್, ಸಂಸದ ಎಂ.ಮಲ್ಲೇಶ್‌ಬಾಬು, ಎಂ.ಎಲ್.ಸಿ.ಅನಿಲ್‌ಕುಮಾರ್ ಮತ್ತು ಇಂಚರ ಗೋವಿಂದರಾಜು ಇದ್ದರು.