ನ್ಯೂಸ್

ನರೇಗಾ ಯೋಜನೆಯಲ್ಲಿ 247 ಕಾಮಗಾರಿ

ಬನ್ನಿಕುಪ್ಪೆ: ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ಇತ್ತೀಚೆಗೆ ಜರುಗಿತು.

ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳಲ್ಲಿ ಮ-ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿ, ರಸ್ತೆ, ದನದ ಕೊಟ್ಟಿಗೆ, ಕೆರೆ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಇಂಗುಗುಂಡಿ, ಶಾಲಾ-ಕಾಲೇಜು ಶೌಚಗೃಹ, ಕಟ್ಟಡ ದುರಸ್ತಿ, ಅರಣ್ಯೀಕರಣ, ನೆಡುತೋಪು ಸೇರಿದಂತೆ 247 ಹಾಗೂ 15ನೇ ಹಣಕಾಸಿನ 32 ಕಾಮಗಾರಿಗಳು ಸಂಪೂರ್ಣ ಆಗಿವೆ ಎಂದು ಪಿಡಿಒ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಅಕ್ಷರ ದಾಸೋಹ ನಿರ್ದೇಶಕ ರಾಜೇಂದ್ರ, ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದನಾಯ್ಕ, ಉಪಾಧ್ಯಕ್ಷೆ ಐಶ್ವರ್ಯ, ಪಿಡಿಒ ರಾಘವೇಂದ್ರ, ನೋಡಲ್ ಆಫೀಸರ್ ಮಂಜುನಾಥ, ಪ್ರಸನ್ನ ಕಾರ್ಯದರ್ಶಿ ವೇದಮೂರ್ತಿ, ಇಂಜಿನಿಯರ್ ಪವಿತ್ರಾ, ಗ್ರಾಮ ಪಂಚಾಯಿತಿ ಸದಸ್ಯ ನಿಂಗೇಗೌಡ, ಪರಶುರಾಮ್, ಎಂ.ಸಿ. ಚಂದ್ರಶೇಖರ ಇತರರು ಇದ್ದರು.