ನ್ಯೂಸ್

ನಬಾರ್ಡ್‌ಯಿಂದ ನೈರ್ಮಲ್ಯ ಸಾಕ್ಷರತಾ ಅಭಿಯಾನ

ಬೆಂಗಳೂರು : ಅಭಿವೃದ್ಧಿ ಹಣಕಾಸು ಸಂಸ್ಥೆ(ಡಿಎ್ಐ) ಸಹಯೋಗದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ದೇಶಾದ್ಯಂತ 1 ಲಕ್ಷ ಜನಸಂಖ್ಯೆ ಒಳಗೊಂಡ 2 ಸಾವಿರ ಗ್ರಾಮಗಳಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಆರಂಭಿಸಲಿದೆ.


ವಾಶ್(ನೀರು, ನೈರ್ಮಲ್ಯ ಮತ್ತು ಆರೋಗ್ಯ) ಹೆಸರಿನಲ್ಲಿ ನಡೆಯುವ ಈ ಅಭಿಯಾನದಲ್ಲಿ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶುಕ್ರವಾರದಿಂದ (ಅ.2) 2021ರ ಜ.26ರವರೆಗೆ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ನಬಾರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಚ್ಛ ಭಾರತ ಮಿಷನ್‌ಯಡಿ(ಎಸ್‌ಬಿಎಂ) ನಬಾರ್ಡ್, ಕೇಂದ್ರ ಸರ್ಕಾರಕ್ಕೆ 3.29 ಕೋಟಿ ಶೌಚಗೃಹ ನಿರ್ಮಾಣಕ್ಕೆ ಸಹಾಯ ಮಾಡಲಾಗಿದೆ. ಇದಕ್ಕಾಗಿ 15 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದು, ಈವರೆಗೆ 12,298 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಡಿಎ್ಐ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಯೋಗದಲ್ಲಿ ಭಾರತವನ್ನು ಬಯಲು ಶೌಚ ಮುಕ್ತ ದೇಶ ಎಂದು ೋಷಿಸಲಾಗಿದೆ ಎಂದು ನಬಾರ್ಡ್ ತಿಳಿಸಿದೆ.