- ಬೆಂಗಳೂರು
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್), ಅಭಿವೃದ್ಧಿ ಹಣಕಾಸು ಸಂಸ್ಥೆ(ಡಿಎ್ಐ) ಸಹಯೋಗದೊಂದಿಗೆ ರೂಪಿಸಿರುವ ನೈರ್ಮಲ್ಯ ಸಾಕ್ಷರತಾ ಅಭಿಯಾನ ‘ವಾಷ್’(ನೀರು, ಸ್ವಚ್ಛತೆ, ನೈರ್ಮಲ್ಯ)ಗೆ ಚಾಲನೆ ನೀಡಿದೆ.
ಈ ಅಭಿಯಾನಕ್ಕೆ ನಬಾರ್ಡ್ ಬೆಂಗಳೂರು ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತು ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕುಮಾರ್ ವರ್ಮ ಚಾಲನೆ ನೀಡಿದರು.
ನಂತರ ಮಾತನಾಡಿದ ಜಾವೇದ್ ಅಖ್ತರ್, ರಾಜ್ಯ ಸರ್ಕಾರ ಕೂಡ ಬಯಲು ಮಕ್ತ ರಾಜ್ಯ ಮಾಡಲು ಸಾಕಷ್ಟು ಶ್ರಮ ಪಟ್ಟಿದೆ. ಆದರೂ, ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಶೌಚಕ್ಕಾಗಿ ಬಯಲಿಗೆ ಹೋಗುವುದು ರೂಢಿಯಲ್ಲಿದೆ. ನಬಾರ್ಡ್ ಹೊಸ ಅಭಿಯಾನ ಆರಂಭಿಸಿರುವುದು ಖುಷಿ ವಿಚಾರ. ಆ ಮೂಲಕ ದೇಶ ಎಲ್ಲಡೆ ಸ್ವಚ್ಛತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಸರ್ಕಾರದ ಪ್ರಯತ್ನದ ಜತೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಯೋಜನೆಗಳು ಲಕಾರಿಯಾಗಿ ಅನುಷ್ಠಾನವಾಗಲು ಸಾಧ್ಯ. ಪ್ರತಿ ಜಿಲ್ಲೆಗಳಲ್ಲಿನ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದರು.
ಈ ಬಗ್ಗೆ ಮಾತನಾಡಿದ ನೀರಜ್ ಕುಮಾರ್ ವರ್ಮ, ಈ ಅಭಿಯಾನದಲ್ಲಿ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲಿದೆ. 2021 ಜು.26ರವರೆಗೆ ಈ ಅಭಿಯಾನ ನಡೆಯಲಿದೆ. ಸ್ವಚ್ಛ ಭಾರತ ವಿಷನ್(ಎಸ್‌ಬಿಎಂ)ಅಡಿ ನಬಾರ್ಡ್ ದೇಶದಲ್ಲಿ 3.29 ಕೋಟಿ ಶೌಚಗೃಹ ನಿರ್ಮಾಣ ಮಾಡಿಕೊಡುವ ಉದ್ದೇಶ ಹೊಂದಿದೆ. ಇದಕ್ಕಾಗಿ 12,298 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಕರೊನಾ ಹಿನ್ನೆಲೆಯಲ್ಲಿ ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳವುದು ಅತಿ ಅಗತ್ಯ. ಡಿಎ್ಐ ಕೇಂದ್ರ- ರಾಜ್ಯ ಸರ್ಕಾರದ ಸಹಯೋಗದಲ್ಲಿ ಭಾರತವನ್ನು ಬಯಲು ಶೌಚಮುಕ್ತ ದೇಶ ಎಂದು ೋಷಿಸಲಾಗಿದೆ ಎಂದು ನಬಾರ್ಡ್ ತಿಳಿಸಿದರು. ವರ್ಚುವೆಲ್ ಮೂಲಕ ಮೊದಲ ಹಂತವಾಗಿ ರಾಜ್ಯದಲ್ಲಿರುವ ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ಹಾಸನ ಮತ್ತು ಕಲಬುರಗಿ ಏಕಕಾಲದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಭಾಗವಹಿಸಿ ಅಭಿಯಾನ ಯಶಸ್ಸಿಗೆ ಶ್ರಮಿಸುವುದಾಗಿ ತಿಳಿಸಿದರು.
ಜನರು ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಶೌಚಗೃಹ ನಿರ್ಮಾಣ ಮತ್ತು ರಿಪೇರಿ ಮಾಡಿಕೊಳ್ಳಬಹುದು. ಇದಕ್ಕೆ ಶೇ.95 ಹಣಕಾಸಿನ ನೆರವು ಮತ್ತು ಸಬ್ಸಿಡಿಯನ್ನು ನಬಾರ್ಡ್ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ಹತ್ತಿರ ನಬಾರ್ಡ್ ನೋಡಲ್ ಕಚೇರಿ ಇಲ್ಲವೆ, ಕೋ ಅಪರೇಟಿವ್ ಬ್ಯಾಂಕ್ ಸಂಪರ್ಕಿಸಬಹುದು.