ವಿಜಯವಾಣಿ ಸುದ್ದಿಜಾಲ ಕೋಲಾರ
ಗಾಂಧಿವಾದಿ, ಸ್ವಾತಂತ್ರ‍್ಯ ಹೋರಾಟಗಾರ ಮಾಜಿ ಸಚಿವ ಟಿ.ಚನ್ನಯ್ಯ ಅವರ ಹಾದಿಯಲ್ಲಿ ಕ್ಷೇತ್ರದ ಜನತೆ ಋಣ ತೀರಿಸುವ ಕೆಲಸ ಮಾಡುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವುದೇ ನನ್ನ ಮೂಲ ಧ್ಯೇಯ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.
ನಗರದ ನಚಿಕೇತನ ನಿಲಯದ ಸುತ್ತಲೂ ಇರುವ ಕಾಂಪೌAಡ್ ಗೋಡೆಗೆ ಸುಮಾರು ೧ ಕೋಟಿ ವೆಚ್ಚದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಟಿ ಚನ್ನಯ್ಯ ಅವರು ಕೋಲಾರದ ಹೃದಯ ಭಾಗದಲ್ಲಿ ಸಮೃದ್ದಿಯಾಗಿ ಸ್ಥಳವನ್ನು ಉಳಿಸಿದ್ದಾರೆ. ಅದಕ್ಕೆ ನಾವುಗಳು ಹೈಟೆಕ್ ಸ್ಪರ್ಷ ನೀಡುವ ಮೂಲಕ ಅವರಿಗೆ ಗೌರವ ನೀಡುತ್ತೇವೆ ಎಂದರು.
ಟಿ ಚನ್ನಯ್ಯ ಅವರು ಕೋಲಾರದ ಮಹಾನ್ ವ್ಯಕ್ತಿ. ಅವರು ಮಾಡಿರುವ ಅಭಿವೃದ್ದಿ ಕೆಲಸಗಳು ಇಂದಿಗೂ ಜೀವಂತವಾಗಿದ್ದು, ಈಗಲೂ ಜನರು ಅದನ್ನು ನೆನಪಿಸಿಕೊಳ್ಳುತ್ತಾರೆ. ಕೋಲಾರ ಕ್ಷೇತ್ರದ ಜನರು ನನ್ನಲ್ಲಿ ನಂಬಿಕೆ ವಿಶ್ವಾಸವನ್ನಿಟ್ಟು ಆಯ್ಕೆಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅಧಿಕಾರ ಇರುವಷ್ಟು ದಿನ ಅಭಿವೃದ್ದಿ ಕೆಲಸಗಳನ್ನು ಮಾಡಬೇಕು ಎನ್ನುವುದು ನನ್ನ ಗುರಿ. ಮುಂದಿನ ದಿನಗಳನ್ನು ಟಿ ಚನ್ನಯ್ಯ ಅವರ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಕನಸು ಇದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಈ ಬಗ್ಗೆ ಪತ್ರವನ್ನು ಬರೆಯಲಾಗಿದೆ. ಸಚಿವರು ಸ್ಪಂದನೆ ನೀಡಿದ್ದು ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ಅವರ ಹೆಸರಿನಲ್ಲಿ ವಸತಿ ಶಾಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ನನ್ನ ಗುರಿ ಒಂದೆ, ಅದು ಅಭಿವೃದ್ದಿ. ಬೇರೆ ಆಸೆಗಳಿಲ್ಲ. ಶಾಶ್ವತವಾಗಿ ಇರುವ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶ. ನಚಿಕೇತನ ನಿಲಯದ ಸುತ್ತಲೂ ಇರುವ ಕಂಪೌAಡ್ ಗೋಡೆ ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ. ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು, ಹೆಚ್ಚಿನ ಲಾಭ ನಿರೀಕ್ಷೆ ಮಾಡದೇ ಅಭಿವೃದ್ದಿ ಪಡಿಸಬೇಕು ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ತು ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಇಂದು ವಿಶೇಷ ದಿನ, ೭೫ ವರ್ಷಗಳ ಹಿಂದೆ ದಿ. ಟಿ ಚನ್ನಯ್ಯ ಮಾಜಿ ಸಚಿವರಾಗಿ ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದವರು. ಅವರು ಉಳಿಸಿದ ಸ್ಥಳಕ್ಕೆ ಶಾಸಕರ ಶಿಫಾರಸ್ಸಿನ ಮೇರೆಗೆ ನಚಿಕೇತನ ನಿಲಯದ ಕಾಂಪೌAಟ್ ನವೀಕರಣ ಕಾಮಗಾರಿಗೆ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕಳೆದ ವರ್ಷ ೬ ಕೋಟಿ ರೂ.ಗಳ ಅನುದಾನದಲ್ಲಿ ಅಂಬೇಡ್ಕರ್ ಹಾಸ್ಟೆಲ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೆವು. ಇದೀಗ ಉದ್ಘಾಟನೆ ಸಿದ್ದವಾಗಿದೆ. ಉದ್ಘಾಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಉದ್ಘಾಟನೆ ಮಾಡಲಾಗುತ್ತದೆ ಎಂದರು.
ಕೋಲಾರ ಕ್ಷೇತ್ರದಲ್ಲಿ ಈವರೆಗೆ ನಡೆಸಲಾಗುತ್ತಿರುವ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ನಾವು ಯಾವುದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಳಿ ಕಾಫಿ ಟೀ ಕುಡಿಯಲ್ಲ. ಐತಿಹಾಸಿಕ ಕಟ್ಟಡವಾಗಿರುವ ನಚಿಕೇತನ ನಿಲಯದಲ್ಲಿ ಈ ಹಿಂದೆ ೩೦೦ ಮಂದಿ ಮಕ್ಕಳು ವಸತಿಯನ್ನು ಪಡೆದುಕೊಳ್ಳುತ್ತಿದ್ದರು ಎಂದು ವಿವರಿಸಿದರು.
ಮಾಲೂರು ತಾಲ್ಲೂಕು ಮಾಸ್ತಿಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗರ್ ವಸತಿ ಶಾಲೆ ಮಾದರಿಯಲ್ಲಿ ಟಿ ಚನ್ನಯ್ಯ ವಸತಿ ಶಾಲೆ ಮಾಡಬೇಕು ಎಂದು ಮನವಿ ಮಾಡಲಾಗಿದ್ದು, ಸಚಿವರಿಗೆ ಪತ್ರವನ್ನು ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ವಸತಿ ಶಾಲೆ ಕಾಮಗಾರಿಗೆ ಅನುಧಾನ ಬಿಡಿಗಡೆಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕೇವಲ ೨೦ ದಿನದಲ್ಲಿ ಕೊತ್ತೂರು ಜಿ ಮಂಜುನಾಥ್ ಅವರನ್ನು ೩೪ ಸಾವಿರಕ್ಕೂ ಮತಗಳಿಂದ ಗೆಲ್ಲಿಸಿರುವ ಕೋಲಾರ ಕ್ಷೇತ್ರದ ಜನತೆ ಇಟ್ಟಿರುವ ನಿರೀಕ್ಷೆಗಳು ಯಾವುದೇ ಕಾರಣಕ್ಕೂ ಹುಸಿಯಾಗುವುದಿಲ್ಲ. ಆ ನಂಬಿಕೆ ಅವರ ಮೇಲಿದೆ ಅದನ್ನು ಶಾಸಕರು ಈಡೇರಿಸುತ್ತಾರೆ. ಉತ್ತಮವಾದ ಶಾಸಕರು ನಮಗೆ ಸಿಕ್ಕಿದ್ದಾರೆ. ಎಲ್ಲರೂ ಅವರ ಜೊತೆಲಿ ಇದ್ದು, ಅವರ ಕೈ ಬಲಪಡಿಸೋಣ ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ದಲಿತ ಸಂಘಟನೆಯ ಮುಖಂಡರಾದ ಟಿ. ವಿಜಿಕುಮಾರ್, ಪಂಡಿತ್ ಮುನಿವೆಂಕಟಪ್ಪ ಬೆಳಗಾನಹಳ್ಳಿ ವೆಂಕಟಮುನಿಯಪ್ಪ, ನಗರಸಭೆ ಸದಸ್ಯ ಅಂಬರೀಷ್ ಮುಂತಾದವರು ಇದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೧ : ನಗರದ ನಚಿಕೇತನ ನಿಲಯದ ಕಾಂಪೌAಡ್ ಗೋಡೆಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ ಮುಂತಾದವರು ಇದ್ದರು.