ನ್ಯೂಸ್

ನಗರಸಭೆಯ ಹೊರಗುತ್ತಿಗೆ ನೌಕರರಿಗೆ ಬಾಕಿ ೯ ತಿಂಗಳ ವೇತನ ಆ.೨೦ ರೊಳಗಾಗಿ ನೀಡದಿದ್ದರೆ ಸ್ವಚ್ಛತಾ ಕಾರ್ಯ ಸ್ಥಗಿತಕ್ಕೆ ಪೌರಕಾರ್ಮಿಕರ ನಿರ್ಧಾರ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರಸಭೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ೯ ತಿಂಗಳ ಬಾಕಿ ವೇತನ ನೀಡದೆ ಇರುವುದರಿಂದ ನೌಕರರು ಪರದಾಡುವಂತಾಗಿದ್ದು, ಪೌರಾಯುಕ್ತರಿಗೆ, ಜಿಲ್ಲಾದಿಕಾರಿಗಳಿಗೆ ಹಾಗೂ ನಗರಸಭೆ ಅಧ್ಯಕ್ಷರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಅವರ ಮನವಿಗೆ ಸ್ಪಂಧಿಸದೆ ಇರುವುದರಿಂದ ಆ.೨೬ ರ ಒಳಗಾಗಿ ಬಾಕಿ ಇರುವ ವೇತನವನ್ನು ನೀಡದಿದ್ದಲ್ಲಿ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಲು ದಿನಗೂಲಿ ನೌಕರರು ನಿರ್ಧರಿಸಿದ್ದಾರೆ.

ಕೋಲಾರ ನಗರಸಭೆಯಲ್ಲಿ ೪ ವರ್ಷಗಳಿಂದ ೭೪ ಜನ ದಿನಗೂಲಿ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಸದ ವಾಹನ ಚಾಲಕರು, ಯುಜಿಡಿ ವಾಹನ ಚಾಲಕರು, ಲೋರ‍್ಸ್, ಕ್ಲೀರ‍್ಸ್, ಸ್ಯಾನಿಟೇಜರ್ ಸೂಪರ್ ವೈಜರ್ಸ್ ಮತ್ತು ಮೇಸ್ತಿçಗಳು ಮತ್ತು ಇನ್ನು ಇತರೆ ನೌಕರರು ಪ್ರತಿದಿನ ಬೆಳಗಿನ ಜಾವ ೫-೩೦ ರಿಂದ ಮಧ್ಯಾಹ್ನ ೨ರವರೆಗೆ ಎಲ್ಲಾ ನೌಕರರು ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುತ್ತಿದ್ದು, ಈ ಬಡ ನೌಕರರಿಗೆ ನೀಡಬೇಕಾಗಿದ್ದ ಸುಮಾರು ೯ ತಿಂಗಳ ಬಾಕಿ ವೇತನವನ್ನು ನೀಡಿರುವುದಿಲ್ಲ.

ಸುಮಾರು ೭೪ ಮಂದಿ ನೌಕರರು ಹಲವಾರು ಬಾರಿ ಹಿಂದಿನ ಪೌರಾಯುಕ್ತರು, ಈಗಿನ ಪೌರಾಯುಕ್ತರನ್ನು ಬೇಟಿ ಮಾಡಿ, ಬಡ ನೌಕರರ ಕಷ್ಟ ಸುಖಗಳ ಬಗ್ಗೆ ಹಾಗೂ ವೇತನದ ಬಗ್ಗೆ ಖುದ್ದಾಗಿ ಬೇಟಿಯಾಗಿ ತಿಳಿಸಿದರೂ ಸಹ ನಮಗೆ ಬಾಕಿ ವೇತನವನ್ನು ನೀಡಿಲ್ಲ ಎಂದು ದೂರಿದ್ದಾರೆ.

ಜುಲೈ ೨೮ ರಂದು ಸಂಜೆ ಎಲ್ಲಾ ಸ್ವಚ್ಛತಾ ಕಾರ್ಮಿಕರು ಪೌರಾಯುಕ್ತರು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ಕರೆದು ನಮ್ಮ ವೇತನವನ್ನು ಗಣೇಶ ಚತುರ್ಥಿ ಹಬ್ಬದೊಳಗೆ ೪ ತಿಂಗಳ ಬಾಕಿ ವೇತನವನ್ನು ನೀಡುವುದು, ಹಾಗೂ ಇತರೆ ನಿಮ್ಮ ಕುಂದು ಕೊರತೆಗಳ ಬಗ್ಗೆ ಹಂತ ಹಂತವಾಗಿ ಬಗೆಹರಿಸುತ್ತೇವೆಂದು ಪೌರಾಯುಕ್ತರು ಹಾಗೂ ಅಧ್ಯಕ್ಷರು ಭರವಸೆಯನ್ನು ನೀಡಿದ್ದರು. ಆದರೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ಭರವಸೆ ಹಾಗೂ ಬಾಕಿ ವೇತನವನ್ನು ನೀಡದೆ ಈ ಬಡ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದು, ನಾವುಗಳು ಕುಟುಂಬ ಪೋಷಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಲು ತುಂಬಾ ಕಷ್ಟರವಾಗಿದೆ ಎಂಬುದು ದಿನಗೂಲಿ ನೌಕರರ ಅಳಲಾಗಿದೆ.

ಪೌರಾಯುಕ್ತರಿಗೆ ಮನವಿ :

ದಿನಗೂಲಿ ನೌಕರರು ಪೌರಾಯುಕ್ತರಿಗೆ ಮನವಿ ನೀಡಿ, ನಮ್ಮ ಬೇಡಿಕೆಗಳು ಮತ್ತು ನಮಗೆ ನೀಡಬೇಕಾದ ಬಾಕಿ ವೇತನವನ್ನು ಒಂದು ವಾರದೊಳಗೆ ನೀಡಬೇಕೆಂದು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ, ನಮ್ಮ ಕಷ್ಟ ಸುಖಗಳ ಬಗ್ಗೆ ರವರ ಗಮನಕ್ಕೆ ತಂದು ನಮಗೆ ನ್ಯಾಯ ಒದಗಿಸಿಕೊಡುವಂತೆ ಕೋರುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೋರಾಟ ಹೆಚ್ಚರಿಕೆ :

ನಮ್ಮ ಮನವಿಗೆ ಸ್ಪಂಧಿಸದೇ ಹೋದಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಬೇಕಾಗುತ್ತದೆ. ಆಗ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದರೆ ನಗರಸಭೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ಹೆಚ್ಚರಿಕೆ ನೀಡಿದ್ದಾರೆ.

ಕೋಟ್

ಗೌರಿ ಗಣೇಶ ಹಬ್ಬದ ಒಳಗಾಗಿ ಕನಿಷ್ಟ ೪ ತಿಂಗಳ ಬಾಕಿ ವೇತನವನ್ನಾದರೂ ನೀಡಿದಲ್ಲಿ ಹಬ್ಬ ಆಚರಣೆ ಮಾಡಿಕೊಳ್ಳುವವರಿಗೆ ಮನೆಗಳಲ್ಲಿನ ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿಗಳಿಗೂ ಸಹ ಮನವಿಯನ್ನು ನೀಡಿದ್ದೇವೆ. ನಮ್ಮ ಕಷ್ಟವನ್ನು ಅವರ ಗಮನಕ್ಕೆ ಮನವಿ ಮೂಲಕ ತಂದಿದ್ದೇವೆ. ಪೌರಾಯುಕ್ತರು ಮತ್ತು ನಗರಸಭಾ ಅಧ್ಯಕ್ಷರ ಗಮನಕ್ಕೂ ತಂದಿದ್ದೇವೆ.

-ದಿನಗೂಲಿ ನೌಕರ ಮಂಜುನಾಥ್

ಕೋಟ್

ನಾನು ಹೊಸದಾಗಿ ಪೌರಾಯುಕ್ತರಾಗಿ ಬಂದ ನಂತರ ಹೊರಗುತ್ತಿಗೆ ನೌಕರರಿಗೆ ೨ ತಿಂಗಳಿAದ ಸಂಬಳ ನೀಡಲಾಗುತ್ತಿದೆ. ಹಿಂದೆ ಇರುವ ೯ ತಿಂಗಳ ಬಾಕಿ ಹಣವನ್ನು ಪರಿಶೀಲನೆ ಮಾಡಬೇಕಾಗುತ್ತದೆ. ನಾವು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಗುತ್ತಿಗೆದಾರನಿಗೆ ಪ್ರತಿ ತಿಂಗಳ ಸಂಬಳ ನೀಡುತ್ತೇವೆ. ಗುತ್ತಿಗೆದಾರರ ನಿರ್ಲ್ಯಕ್ಷö್ಯವೂ ಇರಬಹುದು. ಅದನ್ನು ಪರಿಶೀಲಿಸಲಾಗುವುದು. ೫ ದಿನಗಳ ಹಿಂದೆ ಒಂದು ತಿಂಗಳ ಸಂಬಳವನ್ನು ನೀಡಿದ್ದೇವೆ. ಗೌರಿ-ಗಣೇಶ ಹಬ್ಬದೊಳಗಾಗಿ ಮುಂಗಡವಾಗಿಯೇ ಇನ್ನೊಂದು ತಿಂಗಳ ಸಂಬಳವನ್ನು ನೀಡುತ್ತೇವೆ. ದಿನಗೂಲಿ ನೌಕರರ ಸಂಬಳವನ್ನು ಆಯಾ ತಿಂಗಳಲ್ಲಿಯೇ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

-ನವೀನ್‌ಚಂದ್ರ, ಪೌರಾಯುಕ್ತರು, ಕೋಲಾರ.

ಚಿತ್ರ ೨೧ ಕೆ.ಎಲ್.ಆರ್. ೦೫ : ನಗರಸಭೆ ಚಿತ್ರ