ನ್ಯೂಸ್

ನಗರಸಭಾ ಮಾಜಿ ಸದಸ್ಯ ರಮೇಶ್ ಬಾಬು ನಿಧನ

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ನಗರಸಭೆ ಸದಸ್ಯ ರಮೇಶ್ ಬಾಬು ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನ ಮೈಸೂರು ಮತ್ತು ಇನ್ನಿತರ ಕಡೆ ಚಿಕಿತ್ಸೆ ನೀಡಿಸಲಾಯಿತು. ಆದರೂ ಕೂಡ ಗುಣಮುಖರಾಗಿರಲಿಲ್ಲ, ನಂತರ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಸಾವನ್ನಪ್ಪಿದ್ದು, ಡೆಂೆನಿಂದ ನಿಧನರೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ರಮೇಶ್ ಬಾಬು ಅವರು 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಗರಸಭೆಗೆ ನಾಮನಿರ್ದೇಶದ ಸದಸ್ಯರಾಗಿ ನೇಮಕಗೊಂಡಿದ್ದರು. ನಂತರ 2013ರಲ್ಲಿ ನಡೆದ ನಗರಸಭೆ ಚುನಾವಣೆಗೆ 19ನೇ ವಾರ್ಡಿನಿಂದ ಗೆಲುವು ಸಾಧಿಸಿದ ಬಿಜೆಪಿಯ ಏಕೈಕ ನಗರಸಭಾ ಸದಸ್ಯ ಎಂಬ ಹೆಗ್ಗಳಿಕೆಗೂ ಕೂಡ ಇವರು ಪಾತ್ರರಾಗಿದ್ದರು. ಇವರ ಅಂತ್ಯಕ್ರಿಯೆ ತೇಜೂರಿನಲ್ಲಿ ನಡೆಯಿತು.