ನ್ಯೂಸ್

ನಗರದಲ್ಲಿ ದೇಶದ ಮೊದಲ ಪಾಪ್​ ಅಪ್​ ಸೈಕಲ್​ ಪಥ

ಸಿಲ್ಕ್​ಬೋರ್ಡ್​ ಜಂಕ್ಷನ್​ನಿಂದ ಕೆ.ಆರ್​.ಪುರ ಲೋಯರ್​ ಜಂಕ್ಷನ್​ವರೆಗಿನ ಮಾರ್ಗವೂ ಸೇರಿದಂತೆ ನಗರದ 25 ವಾರ್ಡ್​ಗಳಲ್ಲಿ ಸೈಕಲ್​ ಪಥ ನಿರ್ಮಾಣಕ್ಕೆ ಡಲ್ಟ್​ ನಿರ್ಧರಿಸಿದೆ. ಎಲ್ಲೆಡೆಯೂ ಸೈಕಲ್​ ಸವಾರರಿಗೆ ಸುರಕ್ಷತೆ ಒದಗಿಸುವ ಮಾದರಿಯ ಪಾಪ್​ ಅಪ್​ ಪಥ ನಿಮಿರ್ಸಲಾಗುತ್ತದೆ. ಅದರಿಂದಾಗಿ ಬೈಕ್​ ಸೇರಿ ಇನ್ನಿತರ ವಾಹನಗಳು ಸೈಕಲ್​ ಪಥದಲ್ಲಿ ಸಂಚರಿಸುವುದು, ನಿಲುಗಡೆ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಅದರಿಂದ ಸೈಕಲ್​ ಸವಾರರು ಯಾವುದೇ ಭಯವಿಲ್ಲದೆ ತೆರಳಬಹುದಾಗಿದೆ.

25ಕ್ಕೂ ಹೆಚ್ಚಿನ ವಾರ್ಡ್​ಗಳಲ್ಲಿ ಪಥ:

ಮೋಟಾರು ರಹಿತ ಸಾರಿಗೆ ಸೇವೆಗೆ ಉತ್ತೇಜನ ನೀಡುವ ಸಲುವಾಗಿ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್​) ಬೆಂಗಳೂರಿನ 34 ಕಿ.ಮೀ. ಉದ್ದದ ರಸ್ತೆಯಲ್ಲಿ ಸೈಕಲ್​ ಪಥ ನಿರ್ಮಾಣದ ಉದ್ದೇಶ ಹೊಂದಿದೆ. ಅದಕ್ಕೆ ಬಿಬಿಎಂಪಿ ನೆರವು ನೀಡುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಪಾಪ್​ ಅಪ್​ ಸೈಕಲ್​ ಪಥ ನಿಮಿರ್ಸುತ್ತಿದೆ. ಸಿಲ್ಕ್​ಬೋರ್ಡ್​ ಜಂಕ್ಷನ್​ನಿಂದ ಕೆ.ಆರ್​.ಪುರ ಲೋಯರ್​ ಜಂಕ್ಷನ್​ವರೆಗಿನ 34 ಕಿ.ಮೀ. ಉದ್ದದ ಮಾರ್ಗದಲ್ಲಿ ಸೈಕಲ್​ ಪಥ ನಿಮಿರ್ಸಲಾಗುತ್ತದೆ. ಈಗಾಗಲೆ ಪಥ ನಿರ್ಮಾಣ ಆರಂಭವಾಗಿದ್ದು, ನ. 1ರ ವೇಳೆಗೆ 5 ಕಿ.ಮೀ. ಪಥ ನಿರ್ಮಾಣ ಪೂರ್ಣಗೊಳ್ಳಲಿದೆ. ಡಿಸೆಂಬರ್​ ಅಂತ್ಯದ ವೇಳೆಗೆ 25 ಕಿ.ಮೀ. ಉದ್ದದ ಸೈಕಲ್​ ಪಥ ನಿಮಿರ್ಸುವ ಗುರಿಹೊಂದಲಾಗಿದೆ.

ಬೆಂಗಳೂರು: ಸೈಕಲ್​ ಸವಾರರ ಸುರಕ್ಷತೆಗಾಗಿ ಬುಲಾರ್ಡ್​ ಅಳವಡಿಸುವ ಪಾಪ್​ ಅಪ್​ ಸೈಕಲ್​ ಪಥವನ್ನು ಹೊರವರ್ತುಲ ರಸ್ತೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪ್ರಕ್ರಿಯೇ ದೇಶದಲ್ಲೇ ಮೊದಲಾಗಿದ್ದು, ಮೋಟಾರು ವಾಹನಗಳ ಬಗೆಗಿನ ಭಯವಿಲ್ಲದೆ ಸೈಕಲ್​ ಸವಾರಿ ಮಾಡಲು ಸಹಕಾರಿಯಾಗಲಿದೆ.