ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ತಲೆ ಎತ್ತಿದ್ದು, ದೊಡ್ಡ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ಹೊರ ಜಿಲ್ಲೆ ಸೇರಿದಂತೆ ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಕೆಲಸ ಹರಸಿ ಕೋಲಾರ ಜಿಲ್ಲೆಗೆ ಬಂದಿರುವುದರಿAದ ಕೋಲಾರ ನಗರದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಮೇಜರ್ ಸರ್ಜರಿ ಆಗಬೇಕಿದೆ.
ಕೋಲಾರ ನಗರದಲ್ಲಿ ರಸ್ತೆಗಳು ಕಿರಿದಾಗಿರುವ ಕಾರಣ ವಾಹನ ಸವಾರರು ಸಂಚರಿಸಲು ಪರಿತಪಿಸಬೇಕಿದ್ದ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ನಡು ರಸ್ತೆಯಲ್ಲೇ ನಿಲ್ಲಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ಕಿರಿ ಕಿರಿ ಉಂಟಾಗಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುತ್ತಿದೆ.
ಕೋಲಾರ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಬೆಂಗಳೂರು, ಮಾಲೂರಿಗೆ ಸಂಚರಿಸುವ ವಾಹನಗಳು ಬ್ರಿಡ್ಜ್ ಹತ್ತುವ ಪ್ರಾರಂಭದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಮತ್ತು ಬಂಗಾರಪೇಟೆ ಮತ್ತು ಕೆ.ಜಿ.ಎಫ್ ಕಡೆ ಸಂಚರಿಸುವ ಬಸ್‌ಗಳು ಕ್ಲಾಕ್ ಟವರ್ ವೃತ್ತದ ಬಂಗಾರಪೇಟೆ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಕ್ಲಾಕ್ ಟವರ್ ವೃತ್ತದಲ್ಲಿ ನಾಲ್ಕು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ.
ಖಾಸಗಿ ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ರಸ್ತೆಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವುದು ಮತ್ತು ವಿದ್ಯಾರ್ಥಿಗಳು ಬಸ್ಸು ಇಳಿದ ತಕ್ಷಣ ಮಕ್ಕಳನ್ನು ರಸ್ತೆ ದಾಟಿಸಲು ಶಾಲಾ ವಾಹನದಲ್ಲಿ ಒಬ್ಬ ವ್ಯಕ್ತಿ ಇಲ್ಲದೆ ಕೆಲವೊಂದು ವಿದ್ಯಾರ್ಥಿಗಳಿಗೆ ಪೋಷಕರು ಬಸ್ ಹತ್ತಿರ ಬಂದು ಇಳಿಸಿ ಕರೆದುಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ.
ಕೆಲವು ಸಂದರ್ಭಗಳಲ್ಲಿ ಪೋಷಕರು ಬಾರದಿದ್ದ ಕಾರಣ ವಿದ್ಯಾರ್ಥಿಗಳೇ ರಸ್ತೆ ದಾಟುವಾಗ ಸಮಸ್ಯೆಗಳು ಉಂಟಾಗುತ್ತಿವೆ. ಸಂಜೆ ಶಾಲೆ ಬಿಡುವ ಸಮಯದಲ್ಲಿ ಟೇಕಲ್ ರಸ್ತೆಯಲ್ಲಿ ಕೆಲವು ಶಾಲಾ ವಾಹನಗಳದ್ದೇ ಕಾರು ಬಾರಾಗಿದ್ದು, ನಡು ರಸ್ತೆಯಲ್ಲಿಯೇ ಶಾಲಾ ವಾಹನಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಇಳಿಸಲಾಗುವುದರಿಂದ ಸಾರ್ವಜನಿಕರು ಆ ರಸ್ತೆಯಲ್ಲಿ ಸಂಚರಿಸಲು ತೀವ್ರ ಕಿರಿ ಕಿರಿ ಉಂಟಾಗುತ್ತದೆ.
ಕರ್ಕಶ ಹಾರನ್ ಶಬ್ದದಿಂದ ಕಿರಿ ಕಿರಿ :
ನಗರದಲ್ಲಿ ಸಂಚರಿಸುವ ಖಾಸಗಿ ಬಸ್ ಸೇರಿದಂತೆ ದೊಡ್ಡ ಗಾತ್ರದ ಖಾಸಗಿ ವಾಹನಗಳು ಕರ್ಕಶ ಶಬ್ದ ಉಗುಳುವ ಹಾರನ್‌ಗಳನ್ನು ಬಳಸುವುದರಿಂದ ರಸ್ತೆಗಳಲ್ಲಿ ದ್ವಿ ಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸುವಾಗ ಹಿಂಬದಿಯಿAದ ಬರುವ ದೊಡ್ಡ ಗಾತ್ರದ ವಾಹನಗಳು ಕರ್ಕಶ ಶಬ್ದದ ಹಾರನ್ ಮಾಡುವುದರಿಂದ ಭಯಪಟ್ಟು ಕೆಳಗೆ ಬಿದ್ದ ಹಲವು ಪ್ರಸಂಗಗಳು ನಗರದಲ್ಲಿ ನಡೆದಿವೆ, ನಗರದಲ್ಲಿ ಸಂಚರಿಸುವ ವಾಹನಗಳಿಗೆ ಕಡಿಮೆ ಶಬ್ದ ನೀಡುವ ಹಾರನ್ ಅಳವಡಿಸಲು ಕ್ರಮ ಕೈಗೊಳ್ಳಬೇಕಿದೆ.
ನಡು ರಸ್ತೆಯಲ್ಲಿ ವಾಹನ ನಿಲುಗಡೆ, ವಾಹನ ಸವಾರರಿಗೆ ಕಿರಿ ಕಿರಿ :
ಅಮ್ಮಾರ ಪೇಟೆ ವೃತ್ತದಿಂದ ಶ್ರೀನಿವಾಸಪುರ ಟೋಲ್ ಗೇಟ್ ವರೆಗೆ ಸಂಚರಿಸುವ ಬಂಬೂ ಬಜಾರ್ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸುವುದರಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು ಆ ರಸ್ತೆಯಲ್ಲಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಖಾಸಗಿ ಕಾರ್ಖಾನೆಗಳ ಬಸ್ಸುಗಳು ಸಂಜೆ ಮತ್ತು ಬೆಳ್ಳಿಗ್ಗಿನ ವೇಳೆ ಕಾರ್ಮಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹತ್ತಿಸಿಕೊಳ್ಳುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ರಸ್ತೆ ಪಕ್ಕದಲ್ಲಿ ಖಾಲಿ ಜಾಗ ಇದ್ದರೂ ಬಸ್ಸುಗಳು ಡಾಂಬರೀಕರಣ ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಮತ್ತಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.
ಬಾಕ್ಸ್
ಟ್ರಾಫಿಕ್ ಜಾಮ್ ಸರಿಪಡಿಸಲು ಪೋಲಿಸ್ ಇಲಾಖೆ, ಶಾಲಾ ಕಾಲೇಜು ವಾಹನಗಳ ಚಾಲರಿಗೆ ಆಗಾಗ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕಾರ್ಖಾನೆ ಬಸ್ಸುಗಳ ಚಾಲಕರಿಗೂ ಮಾಡಬೇಕಾಗಿದೆ. ಅಮ್ಮವಾರಿಪೇಟೆ ರಸ್ತೆ ಮತ್ತು ಬಂಬೂಬಜಾರ್ ರಸ್ತೆಯ ಅಕ್ಕಪಕ್ಕಗಳಲ್ಲಿ ಅಂಗಡಿಗಳ ಮುಂಭಾಗ ಲೋಡ್ ಮತ್ತು ಅನ್‌ಲೋಡ್ ಮಆಡುವ ವಾಹನಗಳನ್ನು ತೆರವು ಮಾಡಿಸಬೇಕಾಗಿದೆ. ಟ್ರಾಫಿಕ್ ಸಮಸ್ಯೆ ನೀಗಿಸಲು ಪೋಲಿಸ್ ಇಲಾಖೆ ಮುಂದಾಗಬೇಕಾಗಿದೆ.
ಕೋಟ್
ಇತ್ತೀಚೆಗೆ ಕೋಲಾರ ನಗರದಲ್ಲಿ ಖಾಸಗಿ ಕಂಪನಿ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದು ಕಂಪನಿ ಬಸ್ ಗಳು ನಡುರಸ್ತೆಯಲ್ಲಿಯೇ ನಿಲ್ಲಿಸಿ ಕಾರ್ಮಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಇದನ್ನು ಪ್ರಶ್ನಿಸುವ ಸಾರ್ವಜನಿಕರ ಮೇಲೆ ಬಸ್ ಚಾಲಕರು ದರ್ಪ ತೋರಿ ಧಮ್ಕಿ ಹಾಕುತ್ತಾರೆ, ಟ್ರಾಫಿಕ್ ಪೊಲೀಸರು ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
-ಚAದ್ರಶೇಖರ್, ಕೋಲಾರ ನಗರ ವಾಸಿ.
ಚಿತ್ರ ೦೮ ಕೆ.ಎಲ್.ಆರ್. ೦೧ : ಟೇಕಲ್ ರಸ್ತೆಯಲ್ಲಿ ಶಾಲಾ ವಾಹನಗಳ ಮತ್ತು ಖಾಸಗಿ ಕಾರ್ಖಾನೆಗಳ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಟ್ರಾಫಿಕ್ ಜಾಮ್ ಆಗಿರುವುದು.
ಚಿತ್ರ ೦೮ ಕೆ.ಎಲ್.ಆರ್. ೦೧ಎ : ಚಂದ್ರಶೇಖರ್, ಕೋಲಾರ ನಗರದ ನಿವಾಸಿ ರವರ ಭಾವಚಿತ್ರ