ನ್ಯೂಸ್

ನಗರ ಪಾಲಿಕೆ ಆಯುಕ್ತರ ನಗರ ಪ್ರದಕ್ಷಿಣೆ

ನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನೂತನ ಆಯುಕ್ತ ಶೇಖ್ ತನ್ವೀರ್ ಆಸ್ೀ ಸೋಮವಾರ ನಗರ ಪ್ರದಕ್ಷಿಣೆ ಮಾಡಿದ್ದಾರೆ.

ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಪರಿಶೀಲನೆಯನ್ನು ಆಯುಕ್ತರು ನಡೆಸಿದರು. ಎಂಜಿ ರಸ್ತೆ, ಅಗ್ರಹಾರ, ಗುಂಡೂರಾವ್ ನಗರ, ಜೆಎಸ್‌ಎಸ್ ಆಸ್ಪತ್ರೆ ಮತ್ತು ಚಾಮುಂಡಿ ಪುರಂ ಬಳಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಅಭಿವೃದ್ದಿ ವಿಭಾಗದ ಉಪ ಆಯುಕ್ತೆ ಕೆ.ಜೆ.ಸಿಂಧು, ಇಇ ಮಹೇಶ್, ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಇಇ ಶಿಲ್ಪಾ, ಎಇ ಚೇತನ್ ಇದ್ದರು.

ಜ.27 ರಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಶೇಖ್ ತನ್ವೀರ್ ಆಸ್ೀ ಅವರು, ಖುದ್ದಾಗಿ ತಾವೇ ರಸ್ತೆಗಿಳಿದಿದ್ದಾರೆ. ಪ್ರತಿ ದಿನ ಎಲ್ಲ ವಲಯ ಕಚೇರಿಗಳೊಂದಿಗೆ ವಾರ್ಡ್‌ಗಳಿಗೆ ದಿಢೀರ್ ಭೇಟಿ ನೀಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಕಾಮಗಾರಿಯಲ್ಲಿ ಲೋಪ ಕಂಡು ಬಂದರೆ ತಕ್ಷಣ ಗುತ್ತಿಗೆದಾರೊಂದಿಗೆ ಸಂಬಂಧ ಪಟ್ಟ ಅಧಿಕಾರಿಗಳಿ ಎಚ್ಚರಿಕೆ ನೀಡುವ ಮೂಲಕ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ.