ನ್ಯೂಸ್

ನಕ್ಷಾ ಬಿಲ್ಡರ್ಸ್‌ಗೆ ಮೊದಲ ಬಹುಮಾನ

ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಶಾಖೆ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಮೈಬಿಲ್ಡ್-24’ ವಸ್ತು ಪ್ರದರ್ಶನದಲ್ಲಿ ಹೆಸರಾಂತ ಕನ್ಸ್‌ಸ್ಟ್ರಕ್ಷನ್ ಕಂಪನಿ ‘ನಕ್ಷಾ ಬಿಲ್ಡರ್ಸ್’ ಪ್ರಶಸ್ತಿ ಪಡೆದಿದೆ.

ಮೈಬಿಲ್ಡ್‌ನ ಡೈಮಂಡ್ ಬ್ಲಾಕ್ ಮಲ್ಟಿ-ಸ್ಟಾಲ್ ವಿಭಾಗದ ಅಡಿಯಲ್ಲಿ ಮೊದಲ ಬಹುಮಾನವನ್ನು ಗೆಲ್ಲುವ ಮೂಲಕ ತನ್ನ ಹೆಸರಿಗೆ ಮತ್ತೊಂದು ಗರಿ ಸೇರಿಸಿಕೊಂಡಿತು. ಸೋಮವಾರ ನಡೆದ ಮೈಬಿಲ್ಡ್‌ನ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿತು.

ನಕ್ಷಾ ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್‌ಶಂಕರ್ ಮಾತನಾಡಿ, ಮೈಬಿಲ್ಡ್‌ನ ಡೈಮಂಡ್ ಬ್ಲಾಕ್ ಮಲ್ಟಿ-ಸ್ಟಾಲ್ ವಿಭಾಗದಲ್ಲಿ ನಮ್ಮ ಸಂಸ್ಥೆಗೆ ಪ್ರಥಮ ಬಹುಮಾನ ಬಂದಿರುವುದಕ್ಕೆ ಖುಷಿಯಾಗಿದೆ. ಹತ್ತಾರು ಉನ್ನತ ಬಿಲ್ಡರ್ಸ್‌ಗಳು ಮತ್ತು ಡೆವಲಪರ್ಸ್‌ಗಳು ಭಾಗವಹಿಸಿದ್ದರು. ಅವರ ಜತೆಯಲ್ಲಿ ನಮ್ಮ ಸಂಸ್ಥೆ ಈ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ.

ಸದರಿ ಪ್ರಶಸ್ತಿಯು ಉತ್ಕೃಷ್ಟತೆಯ ಬಗೆಗಿನ ನಮ್ಮ ಬದ್ಧತೆ ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಮೀರಿದ ವಿಶ್ವ ದರ್ಜೆಯ ಯೋಜನೆಗಳನ್ನು ನೀಡಲು ಪ್ರೇರಣೆಯಾಗಿದೆ ಎಂದರು.

ಮೈಬಿಲ್ಡ್ ವಸ್ತುಪ್ರದರ್ಶನದಲ್ಲಿ ನಕ್ಷಾ ಬಿಲ್ಡರ್ಸ್ ಮಳಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಮಳಿಗೆಯಲ್ಲಿ ಕಂಪನಿಯ ಇತ್ತೀಚಿನ ಯೋಜನೆಗಳು ಮತ್ತು ಕೊಡುಗೆಗಳನ್ನು ಪ್ರದರ್ಶಿಸಲಾಗಿತ್ತು. ನಕ್ಷಾ ಬಿಲ್ಡರ್ಸ್ ಮೈಸೂರಿನ ಹೆಸರಾಂತ ಕನ್ಸ್‌ಸ್ಟ್ರಕ್ಷನ್ ಕಂಪನಿಯಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಜನರ ಅಭಿರುಚಿಗೆ ತಕ್ಕಹಾಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಮಾದರಿಯ ಮನೆಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಇದ್ದೇವೆ. ನಗರದಲ್ಲಿ ಏಕಕಾಲದಲ್ಲಿ ಅನೇಕ ಮನೆಗಳ ನಿರ್ಮಾಣ ಕಾರ್ಯವನ್ನು ನಡೆಯುತ್ತಿದ್ದು, ಇದು ಕಂಪನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.+917022124411 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.