ನ್ಯೂಸ್

ನಕಲಿ ದಾಖಲೆಗಳಿಗೆ ಸೊಸೈಟಿಯಲ್ಲಿ ಲಕ್ಷ ಲಕ್ಷ ಸಾಲ ಮಂಜೂರು / ಸೊಸೈಟಿ ಕಾರ್ಯದರ್ಶಿ ಶ್ರೀನಾಥ್ ಕೈವಾಡ / ಕ್ರಮಕ್ಕೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಮೀನು ಇಲ್ಲದೆ ಇದ್ದರೂ ಫಹಣಿಯಲ್ಲಿ ಹೆಸರು ಸೃಷ್ಟಿಸಿ ನಕಲಿ ದಾಖಲೆಗಳನ್ನು ನೀಡಿ ದಳಸನೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದಲ್ಲಿ ಲಕ್ಷ ಲಕ್ಷ ಸಾಲ ಪಡೆದಿರುವ ಹಗರಣ ಬೆಳೆಕಿಗೆ ಬಂದಿದ್ದು, ಇದಕ್ಕೆ ಸೊಸೈಟಿಯ ಕಾರ್ಯದರ್ಶಿ ಬಿಸನಹಳ್ಳಿ ಶ್ರೀನಾಥ್ ಕಾರಣ ಎಂದು ಸಾಮಾಜಿಕ ಹೋರಾಟಗಾರ ಬಗಲಹಳ್ಳಿ ಸುರೇಶ್‌ಬಾಬು ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ದಳಸನೂರು ಸೊಸೈಟಿಯಲ್ಲಿ ಕಾರ್ಯದರ್ಶಿ ಬಿಸನಹಳ್ಳಿ ಶ್ರೀನಾಥ್ ಜಮೀನು ಇಲ್ಲದೆ ಇದ್ದರು ಅವರಿಗೆ ನಕಲಿ ದಾಖಲೆಗಳಿಗೆ ಸಾಲ ಮಂಜೂರು ಮಾಡಿದ್ದಾರೆ. ಇದು ಒಬ್ಬ ಇಬ್ಬರಿಗೆ ಅಲ್ಲ ಸುಮಾರು ೩೦ ಕ್ಕೂ ಹೆಚ್ಚು ಜನರಿಗೆ ಅಕ್ರಮವಾಗಿ ಸಾಲ ನೀಡಿರುವುದು ಕಂಡು ಬಂದಿದೆ.

ಉದಾಹರಣೆಗೆ ಶ್ರೀನಿವಾಸಪುರದ ತರ‍್ನಹಳ್ಳಿ, ಬಿಸನಹಳ್ಳೀ, ಮಾಸ್ತೇನಹಳ್ಳಿ ಸೇರಿದಂತೆ ಸೊಸೈಟಿ ವ್ಯಾಪ್ತಿಗೆ ಬರುವ ಹತ್ತಾರು ಊರುಗಳಿಗೆ ರೈತರಿಗೆ ಜಮೀನು ಇಲ್ಲದೇ ಇದ್ದರು ನಕಲಿ ದಾಖಲಾತಿಗಳನ್ನು ಪಡೆದು ಶೂನ್ಯ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಿರುವ ಉದಾಹರಣೆಗಳಿವೆ ಎಂದು ಆರೋಪಿಸಿದ್ದಾರೆ.

ಇದಲ್ಲದೆ ಸಾಲದ ಅವಶ್ಯಕತೆ ಇಲ್ಲದಿದ್ದರು ಬಡ್ಡಿ ನೀಡುವಂತಹವರಿಗೆ ಹಾಗೂ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲದಿದ್ದರು ಅಂತಹವರಿಗೆ ಬೆಳೆ ಸಾಲ ಎಂದು ಫಹಣಿಯಲ್ಲಿ ನಮೂದಿಸಿ ಸ್ಥಳ ಮಹಜರು ಮಾಡದೆ ಸಾಲ ಮಂಜೂರು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಸಂಬAಧಪಟ್ಟ ಮೇಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೩ : ಸೊಸೈಟಿ ಕಾರ್ಯದರ್ಶಿ ಬಿಸನಹಳ್ಳಿ ಶ್ರೀನಾಥ್ ಭಾವಚಿತ್ರ