ನ್ಯೂಸ್

ನಕಲಿ ದಾಖಲೆ ಹೊಂದಿದ ವೈದ್ಯರು ಕ್ಲಿನಿಕ್‌ಗಳ ವಿರುದ್ಧ ಕಠಿಣ ಕ್ರಮ / ಜಿಲ್ಲಾಧಿಕಾರಿ ಅಕ್ರಂ ಪಾಷ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾಧಿಕಾರಿ ಅಕ್ರಂಪಾಷ ರವರ ಅಧ್ಯಕ್ಷತೆಯಲ್ಲಿ ನ್ಯಾಯಾಂಗಣ ಸಭಾಂಗಣದಲ್ಲಿ ಶನಿವಾರ ಕೆ.ಪಿ.ಎಂ.ಇ ಕಾಯ್ದೆಯನ್ವಯ ನೋಂದಣಿಯಾಗದೆ ಮತ್ತು ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್‌ಗಳನ್ನು ನಡೆಸುತ್ತಿರುವವರನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಂದೆ ೧೩ ಕ್ಲಿನಿಕ್ ಮಾಲೀಕರನ್ನು ಹಾಜರುಪಡಿಸಲಾಗಿತ್ತು.

ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ೨೦೦೭ ಹಾಗೂ ತಿದ್ದುಪಡಿ ನಿಯಮ ೨೦೧೭ ರಂತೆ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆ.ಪಿ.ಎಂ.ಇ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಖಾಸಗಿ ಆರೋಗ್ಯ ಸಂಸ್ಥೆಗಳಿAದ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುವ ದಿನಾಂಕ ೯೦ ದಿನಗಳೊಳಗಾಗಿ ಅರ್ಜಿಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯು ಜಿಲ್ಲಾ ಕೆ.ಪಿ.ಎಂ.ಇ ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ಪ್ರತಿ ಎರಡು ತಿಂಗಳಿಗೊಮ್ಮೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರಿದವರ ಆಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು. ಅದರಂತೆ ಈ ಹಿಂದೆ ನಡೆದ ಸಭೆಯಲ್ಲಿ ಯಾವುಧೇ ಅರ್ಹ ವೈದ್ಯಕೀಯ ವಿದ್ಯಾರ್ಹತೆಯಿಲ್ಲದೆ ಅನಧಿಕೃತವಾಗಿ ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತಿರುವ ನಕಲಿ ವೈದ್ಯರನ್ನು ಹಾಜರು ಪಡಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸಿದರು.

ದಿನಾಂಕ:೧೪.೦೯.೨೦೨೩ ರಂದು ಒಟ್ಟು ೧೩ ಆರೋಗ್ಯ ಸಂಸ್ಥೆಯವರನ್ನು ಪ್ರಾಧಿಕಾರದ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿ ಒಟ್ಟು ೧೩ ಆರೋಗ್ಯ ಸಂಸ್ಥೆಗಲ್ಲಿ ೧೦ ಆರೋಗ್ಯ ಸಂಸ್ಥೆಯವರು ಹಾಜರಾಗಿರುತ್ತಾರೆ. ಒಟ್ಟು ೧೦ ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ ೦೫ ಆರೋಗ್ಯ ಸಂಸ್ಥೆಗಳನ್ನು ಸೀಜ್ ಮಾಡಲು ಹಾಗೂ ಉಳಿದ ೦೫ ಆರೋಗ್ಯ ಸಂಸ್ಥೆಯವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ವಹಿಸಲು ಹಾಗೂ ಗೈರು ಹಾಜರಾದ ೦೩ ಆರೋಗ್ಯ ಸಂಸ್ಥೆಯವರನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಕಳವಂಜಿ ಗ್ರಾಮದ ವೆಂಕಟೇಶ್ವರ ಕ್ಲಿನಿಕ್ ಪ್ರತಾಪ್, ದೇಶಹಳ್ಳಿ ಗ್ರಾಮದ ಪ್ರಗತಿಕ್ಲಿನಿಕ್ ರಜನಿಕಾಂತ್, ಕೆ.ಜಿ.ಎಫ್ ತಾಲ್ಲೂಕಿನ ಮಿನಿ ಇಬ್ರಾಹಿಂ ರಸ್ತೆಯ, ಉರಿಗಾಂಪೇಟೆ ಗ್ರಾಮದ ಸಂಗೀತ ಕ್ಲಿನಿಕ್ ಅಣ್ಣಯ್ಯ, ಮಿನಿ ಇಬ್ರಾಹಿಂ ರಸ್ತೆಯ ಇಂಡಿಯನ್ ಕ್ಲಿನಿಕ್ ಎಂ.ಹಮ್ಮ, ಪೂಜಾಕ್ಲಿನಿಕ್ ಸತ್ಯಜಿತ್, ಆರೋಗ್ಯ ವೆಲ್ನೆಸ್ ಸೆಂಟರ್ ಸುರೇಶ್, ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮದ ಶ್ರೀನಿವಾಸಗೌಡ, ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ಹಿಂದೂಕ್ಲಿನಿಕ್ ಮಧು, ಸೋಮಯಾಜಲಹಳ್ಳಿ ಗ್ರಾಮದ ಟಿ.ಎಂ ಹೇಂ ಕ್ಲಿನಿಕ್‌ಶಂಕರ್, ರಾಯಲ್ಪಾಡು ಗ್ರಾಮದ ಶ್ರೀ ವಿನಾಯಕ ಕ್ಲಿನಿಕ್‌ಬಾಲಾಜಿ ಸಿಂಗ್ ಈ ಕ್ಲಿನಿಕ್‌ಗಳ ಮಾಲೀಕರು ಸಭೆಗೆ ಹಾಜರಾಗಿದ್ದು, ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಜನರ ಜೀವದ ಜೊತೆಗೆ ಚಲ್ಲಾಟವಾಡಿದ ಇವರಿಗೆ ತೀವ್ರತರವಾದ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದ ಅರುಣ್ ಕ್ಲಿನಿಕ್ ಹಾಗೂ ಬಲಮಂದೆ ಗ್ರಾಮದ ಕೋಟೇಶ್ವರನ್ ಕುಷಾಲ್ ಕ್ಲಿನಿಕ್. ಕೆ.ಜಿ.ಎಫ್ ತಾಲ್ಲೂಕಿನ ಉರಿಗಾಂಪೇಟೆ ಗ್ರಾಮದ ನದೀಮ್ ಹೆಲ್ತ್ ಪಾಯಿಂಟ್ ಕ್ಲಿನಿಕ್ ಇವರುಗಳು ಸಭೆಗೆ ಗೈರು ಹಾಜರಾಗಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒಟ್ಟು ಹತ್ತು ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ ಹತ್ತು ಕ್ಲಿನಿಕ್‌ಗಳನ್ನು ಸೀಜ್ ಮಾಡಲು ಮತ್ತು ಏಳು ಕ್ಲಿನಿಕ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಮುಟುಗೋಲು ಹಾಕಿಕೊಂಡಿರುವ ದಾಖಲೆಗಳ ಸತ್ಯಾ ಸತ್ಯತೆಯನ್ನು ತಿಳಿಯಲು ಸೈಬರ್ ಕ್ರೆöÊಂ ವಿಭಾಗಕ್ಕೆ ಸಲ್ಲಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೭ : ನಕಲಿ ಕ್ಲೀನಿಕ್ ಮಾಲೀಕರ ಮತ್ತು ನಕಲಿ ವೈದ್ಯರ ಸಭೆಯನ್ನು ನಡೆಸುತ್ತಿರುವ ಜಿಲ್ಲಾಧಿಕಾರಿ ಅಕ್ರಂಪಾಷ, ಸಿ.ಇ.ಓ. ಪದ್ಮಾಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್ ಇದ್ದರು.