ನ್ಯೂಸ್

ನಕಲಿ ಜಾಮೀನು ನೀಡುವ ದಂಧೆಕೋರನ ಸೆರೆ/ವಿವಿಧ ಕೋರ್ಟುಗಳ ೮೦ ಪ್ರಕರಣಗಳಿಗೆ ನಕಲಿ ದಾಖಲೆಗಳನ್ನು ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ

ವಿಜಯವಾಣಿ ಸುದ್ದಿಜಾಲ ಕೋಲಾರ

ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿ ಆರೋಪಿಗಳಿಗೆ ಜಾಮೀನು ಕೊಡಿಸುವ ದಂಧೆ ನಡೆಸುತ್ತಿದ್ದವನನ್ನು ಕೋಲಾರದ ಗಲ್ ಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೋಲಾರದ ಹಿರಿಯ ಶ್ರೇಣಿ ಮತ್ತು ಸಿ.ಜೆ.ಎಂ ನ್ಯಾಯಾಲಯಗಳಲ್ಲಿನ ಸಿಸಿ ೧೫೮/೨೦೧೮ ಮತ್ತು ಸಿಸಿ ೨೩೮/೨೦೧೮ ಪ್ರಕರಣಗಳಲ್ಲಿನ ಆರೋಪಿಗಳಿಗೆ ಬೇರೆಯವರ ಜಮೀನಿನ ಪಹಣಿಗಳನ್ನು ಉಪಯೋಗಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ನ್ಯಾಯಾಲಯಕ್ಕೆ ನೀಡಿ ಜಾಮೀನು ಮಂಜೂರು ಮಾಡಿಸುತ್ತಿದ್ದ ಬಿ.ವಿ.ಚಲಪತಿ ಎಂಬಾತನನ್ನು ಪೊಲೀಸರು ಇದೀಗ ಕಂಬಿ ಹಿಂದೆ ತಳ್ಳಿದ್ದಾರೆ.

ಈತನ ವಿರುದ್ಧ ಹರಿನಾಥರೆಡ್ಡಿ ದೂರು ನೀಡಿದ್ದ ಮೇರೆಗೆ ಪೊಲೀಸರು ಮೊ.ಸಂ ೨೫/೨೦೨೫ ಕಲಂ ೪೧೫, ೪೧೬, ೪೧೯, ೪೨೦, ೪೬೩, ೪೬೪, ೪೬೫, ೪೭೧ ಐಪಿಸಿ ರೀತ್ಯ ಪ್ರಕರಣ ದಾಖಲಿಸಿದ್ದರು.

ಗಲ್‌ಪೇಟೆ ಪಿಎಸ್‌ಐ ವಿಠಲ್ ವೈ ತಳವಾರ್, ಸಿಬ್ಬಂದಿಯವರಾದ ಮುನಿವೆಂಕಟಸ್ವಾಮಿ, ಷಫೀವುಲ್ಲಾ. ಸುಜ್ಞಾನಕುಮಾರ್, ಮರೇಗೌಡ, ಕೆ.ಟಿ.ಮಂಜುನಾಥ ಅವರ ವಿಶೇಷ ತಂಡವು ರಚಿಸಿ ಆರೋಪಿ ಚಲಪತಿಯನ್ನು ವಶಕ್ಕೆ ತೆಗೆದುಕೊಂಡಿದೆ.

ಈತ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಮೊ.ಸಂ ೧೯೯/೨೦೧೫, ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮೊ.ಸಂ ೪೧೮/೨೦೧೫ ಹಾಗೂ ಕೆಂಪೇಗೌಡ ಪೊಲೀಸ್ ಠಾಣೆ ಮೊ.ಸಂ ೧೭೫/೨೦೧೫ ರಲ್ಲಿ ಸಿ.ಸಿ ೭೦೫೪/೨೦೧೬ರಲ್ಲಿ ನ್ಯಾಯಾಲಯಕ್ಕೆ ನಕಲಿ ದಾಖಲೆ ನೀಡಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ್ದುದು ಬೆಳಕಿಗೆ ಬಂದಿದೆ.

ಇದೇ ರೀತಿ ರಾಜ್ಯದ ೮೦ ಪ್ರಕರಣಗಳಿಗೆ ಸಂಬAಧಿಸಿದAತೆ ವಿವಿಧ ನ್ಯಾಯಾಲಯಗಳಿಗೆ ನಕಲಿ ದಾಖಲೆಗಳನ್ನು ನೀಡಿರುವುದಾಗಿ ಆರೋಪಿಯ ಒಪ್ಪಿಕೊಂಡಿದ್ದಾರೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

-------------------

ಅತಿಥಿ ಶಿಕ್ಷಕನೀಗ ಪೊಲೀಸರ ಅತಿಥಿ

ನಕಲಿ ಜಾಮೀನು ನೀಡುತ್ತಿದ್ದ

ಬಿ.ವಿ.ಚಲಪತಿ (೪೦) ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು. ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿ ನೀಲಗಿರಿಪಲ್ಲಿಯಲ್ಲಿ ವಾಸವಾಗಿದ್ದ. ಈತ ಬಳುವನಹಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರ ೦೯ ಕೆ.ಎಲ್.ಆರ್. ೦೧ ಬಿ.ವಿ.ಚಲಪತಿ ಭಾವಚಿತ್ರ.