ನ್ಯೂಸ್

ನಕಲಿ ಛಾಪಾ ಕಾಗದ ಮಾರಾಟ ಜಾಲ

ಬೆಂಗಳೂರು: ನಿಷೇಧಿತ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕ ಮತ್ತು ಗ್ರಾಹಕನನ್ನು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೀಲಸಂದ್ರದ ಹಸೀಮ್ ಮೋದಿ ಬಾಬು(53) ಮತ್ತು ಬಸವೇಶ್ವರನಗರದ ಹರೀಶ್(55) ಬಂಧಿತರು. ಹಲಸೂರು ಗೇಟ್ ಉಪವಿಭಾಗ ಎಸಿಪಿ ನಜ್ಮ ಾರೂಖಿ ನೇತೃತ್ವದ ತಂಡ ಎಸ್.ಪಿ. ರಸ್ತೆಯ ಅಮರ್ ರೇಡಿಯೋ ಅಂಗಡಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

2002ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿರುವುದಾಗಿ ಸುಳಿವು ಸಿಕ್ಕಿದೆ. ಆಗ ಎಸಿಪಿ ನೇತೃತ್ವದ ತಂಡ ಅ.3ರ ಬೆಳಗ್ಗೆ 10.30ರಲ್ಲಿ ಮಫ್ತಿಯಲ್ಲಿ ಅಂಗಡಿ ಬಳಿಗೆ ಹೋಗಿ ನಿಗಾ ವಹಿಸಿದ್ದರು. ಅಷ್ಟೊತ್ತಿಗೆ ಗ್ರಾಹಕ ಹರೀಶ್, ನಕಲಿ ಛಾಪಾ ಕಾಗದ ಖರೀದಿ ಸಲುವಾಗಿ ಅಂಗಡಿ ಬಳಿಗೆ ಬಂದಿದ್ದು, ರೆಡ್‌ಹ್ಯಾಂಡ್ ಆಗಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಛಾಪಾ ಕಾಗದ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಈ ನಕಲಿ ಛಾಪಾ ಕಾಗದಗಳನ್ನು ಬಳಸಿ 2002ರ ಹಿಂದೆ ನೋಂದಣಿ ಅಥವ ಒಪ್ಪಂದ ಮಾಡಿಕೊಂಡಿರುವ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿಲಭ್ಯವಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್.ಜೆ. ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.