ಕಳಲೆ ಕೇಶವಮೂರ್ತಿ 
ನ್ಯೂಸ್

ನಂಜನಗೂಡಿಗೆ ನಾಳೆ ಮಹದೇಶ್ವರ ಜ್ಯೋತಿ ಯಾತ್ರೆ

ನಂಜನಗೂಡು: ಮಹದೇಶ್ವರ ಜ್ಯೋತಿ ಯಾತ್ರೆ ಅ.8ರ ಶನಿವಾರ ನಂಜನಗೂಡು ತಾಲೂಕು ಪ್ರವೇಶಿಸಲಿದ್ದು, ಅದೇ ದಿನ ಸಂಜೆ ಜಾನಪದ ಕಲಾತಂಡಗಳೊಡನೆ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು.


ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅ.14ರಿಂದ 16ರವರೆಗೆ ಮಹಾಕುಂಭಮೇಳ ನಡೆಯಲಿರುವ ಪ್ರಯುಕ್ತ ಮಹದೇಶ್ವರ ಬೆಟ್ಟದಲ್ಲಿ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಸಿ 3 ತಂಡಗಳ ಮೂಲಕ ಚಾಲನೆ ನೀಡಲಾಗಿದೆ. ಅ.8ರ ಶನಿವಾರ ಸಂಜೆ 4ಗಂಟೆಗೆ ಗುಂಡ್ಲುಪೇಟೆ ಮೂಲಕ ನಂಜನಗೂಡು ತಾಲೂಕನ್ನು ಮಹದೇಶ್ವರ ಜ್ಯೋತಿ ಯಾತ್ರೆ ಪ್ರವೇಶಿಸಲಿದ್ದು ತಾಲೂಕಿನ ಎಲಚಗೆರೆ ಗೇಟ್ ಬಳಿ ಯಾತ್ರೆಯನ್ನು ಭಕ್ತರ ಸಮ್ಮುಖದಲ್ಲಿ ಸ್ವಾಗತಿಸಲಾಗುವುದು. ಬಳಿಕ ಸಂಜೆ 5ಗಂಟೆ ನಂತರ ನಗರದ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗದಿಂದ ಕಲಾತಂಡಗಳೊಡನೆ ಭವ್ಯ ಮೆರವಣಿಗೆ ಸಾಗಲಿದೆ. ನಂತರ ಗೋಳೂರು, ಹೊರಳವಾಡಿ, ನಗರ್ಲೆ, ಕುಪ್ಪರವಳ್ಳಿ ಮೂಲಕ ಜ್ಯೋತಿ ಯಾತ್ರೆ ಸಾಗಿ ಸುತ್ತೂರು ವೀರಸಿಂಹಾಸನಾ ಮಹಾಸಂಸ್ಥಾನ ಮಠದಲ್ಲಿ ಸಂಜೆ ವಾಸ್ತವ್ಯ ಹೂಡಲಿದೆ. ಮರುದಿನ ಹ

ದಿನಾರು ಮಾರ್ಗದಲ್ಲಿ ಸಂಚರಿಸುವ ಜ್ಯೋತಿ ಯಾತ್ರೆಯನ್ನು ಮೈಸೂರು ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2012ರಲ್ಲಿ ಮಹದೇಶ್ವರ ಜ್ಯೋತಿ ಯಾತ್ರೆ ನಡೆಸಿ ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯಿಸಲಾಗಿತ್ತು. ಈ ಬಾರಿ ಜ್ಯೋತಿ ಯಾತ್ರೆ ಮೂಲಕ ಮಹದೇಶ್ವರ ಬೆಟ್ಟದಲ್ಲಿ 1 ಸಾವಿರ ಮಂದಿ ವಾಸ್ತವ್ಯಕ್ಕೆ ನೆರವಾಗುವ ವಸತಿಗೃಹ ನಿರ್ಮಾಣ ಸೇರಿದಂತೆ ಮಹದೇಶ್ವರರು ಸಂಚರಿಸಿರುವ ಮೈಸೂರು ಜಿಲ್ಲೆಯ ಭೀಮನಕೊಲ್ಲಿ ಹಾಗೂ ಬೇಲದಕುಪ್ಪೆ ಸೇರಿದಂತೆ ಇತರ ಪ್ರದೇಶಗಳಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮೂಲಕ ಮನವಿ ಸಲ್ಲಿಸಲಾಗುವುದು. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆಯುತ್ತಿರುವ ಮಹದೇಶ್ವರ ಜ್ಯೋತಿ ಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಅಖಿಲ ಭಾರತ ವೀರಶ್ಯವ ಮಹಾಸಭಾ ಅಧ್ಯಕ್ಷ ದೇವನೂರು ಮಹದೇವಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಶಂಕರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಮಾಜಿ ಉಪಾಧ್ಯಕ್ಷ ಮಂಜುನಾಥ್, ಹುರ ನಟರಾಜ್, ಪಿ.ಶ್ರೀನಿವಾಸ್, ಮಹದೇವನಾಯಕ, ಶ್ರೀನಿವಾಸ್, ಅಜ್ಗರ್ ಮೊದಲಾದವರು ಉಪಸ್ಥಿತರಿದ್ದರು.