ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ಆರ್‌ಬಿಐ ನೋಟು ಮುದ್ರಣ ಘಟಕ, ಆಶ್ರಯ್ ಸೇವಾ ಸಂಸ್ಥಾನ್, ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್‌ಗಳ ಆಶ್ರಯದಲ್ಲಿ ನ.2ರಂದು ಅಂಗವಿಕಲರಿಗೆ ಮಾಡ್ಯುಲರ್ ಕೃತಕ ಅಂಗಗಳ ಕೈ, ಕಾಲಿನ ಅಳತೆ ಪಡೆಯಲಾಗುವುದು ಎಂದು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ಕುಮಾರ್ ಬನ್ಸಾಲಿ ತಿಳಿಸಿದರು.
ನಜರ್‌ಬಾದ್‌ನಲ್ಲಿರುವ ಪೃಥ್ವಿ ವರ್ಲ್ಡ್ ಸಮತ ಭವನ್‌ನಲ್ಲಿ ಅಂದು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಅಳತೆ ಪಡೆದು, ಮುಂದಿನ 45 ದಿನಗಳೊಳಗೆ ಕೃತಕ ಕೈ, ಕಾಲು ವಿತರಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ವರ್ಷ ಈ ಸೇವಾ ಕಾರ್ಯ ಹಮ್ಮಿಕೊಳ್ಳುತ್ತಿದ್ದು, ಸುಮಾರು 200 ಮಂದಿ ಈ ಬಾರಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಎಸ್.ಪ್ರಮೀಳಾ, ಗೋಲ್ಡನ್ ಸುರೇಶ್, ರಮೇಶ್, ರಾಜಶೇಖರ್ ಮತ್ತಿತರರು ಇದ್ದರು.