ಮೂಡಿಗೆರೆಯ ಶ್ರೀ ಹಿರೇದೇವಿರಮ್ಮನಬನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸಮಿತಿಯಿಂದ ಕೆ.ಎಸ್.ಈಶ್ವರಪ್ಪ, ಕಾಂತೇಶ್, ಗುರುರಾಜ್, ಉದ್ಯಮಿ ಚಂದ್ರಹಾಸ್ ಶೆಟ್ಟಿ, ಪಾಂಡುರಂಗ ಶೇಟ್ ಅವರಿಗೆ ಸನ್ಮಾನಿಸಲಾಯಿತು. 
ನ್ಯೂಸ್

ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ಒಪ್ಪಿಸಿ

ಮೂಡಿಗೆರೆ: ಧರ್ಮಸ್ಥಳಕ್ಕಾಗಲಿ, ವೀರೇಂದ್ರ ಹೆಗ್ಗಡೆ ಅವರಿಗಾಗಲಿ ಅವಮಾನ ಮಾಡಲು ಹಿಂದು ಸಮಾಜ ಬಿಡುವುದಿಲ್ಲವೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಂಗಳವಾರ ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಧರ್ಮರಕ್ಷಾ ಯಾತ್ರೆ ನಡೆಸುವ ವೇಳೆ ಪಟ್ಟಣದ ಶ್ರೀ ಹಿರೇದೇವಿರಮ್ಮನಬನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಕ್ಕೆ ಅವಮಾನ ಮಾಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಪ್ರೇರಣೆ ನೀಡುತ್ತಿದೆ ಎಂದರು.

ಎಸ್‌ಐಟಿ ತನಿಖೆಗೆ ಯಾರೂ ಒತ್ತಾಯಿಸಿಲ್ಲ. ರಾಜ್ಯ ಸರ್ಕಾರ ನಿರ್ಮಿಸಿದ ಎಸ್‌ಐಟಿಯಿಂದ ಸತ್ಯ ಹೊರ ಬರುವುದಿಲ್ಲ. ಅಯೋಧ್ಯೆಯಲ್ಲಿ ಯಾವ ರೀತಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೆ ರೀತಿಯಲ್ಲಿ ಧರ್ಮಸ್ಥಳ ಪ್ರಕರಣದಲ್ಲೂ ನ್ಯಾಯ ಸಿಗುತ್ತದೆ. ಧರ್ಮಸ್ಥಳದ ಹೆಸರು ಹಾಳು ಮಾಡುವ ಕುತಂತ್ರಿಗಳಿಗೆ ವಿದೇಶಿ ಹಣ ಕೂಡ ಬರುತ್ತಿದೆ ಎಂಬ ಮಾಹಿತಿ ಇದೆ. ಎಷ್ಟೇ ಪ್ರಯತ್ನ ನಡೆಸಿದರೂ ಅಧರ್ಮಕ್ಕೆ ಸೋಲು, ಧರ್ಮಕ್ಕೆ ನ್ಯಾಯ ಸಿಕ್ಕೆ ಸಿಗುತ್ತದೆ ಎಂಬುದನ್ನು ಮರೆಯಬಾರದು. ಸಂಪೂರ್ಣ ಸತ್ಯ ಹೊರ ಬರಬೇಕಾದರೆ ಪ್ರಕರಣವನ್ನು ಎನ್‌ಐಎಗೆ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಶ್ರೀ ಹಿರೇದೇವಿರಮ್ಮನಬನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯಿಂದ ಶಿವಮೊಗ್ಗ ಬಸವೇಶ್ವರ ಸಮಾಜದ ನಿರ್ದೇಶಕ ವೇದಮೂರ್ತಿ ಮಹಲಿಂಗಯ್ಯ, ಜ್ಞಾನೇಶ್ವರಿ ಗೋಶಾಲೆಯ ಗುರುರಾಜ್, ಉದ್ಯಮಿ ಚಂದ್ರಹಾಸ್ ಶೆಟ್ಟಿ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಶೇಟ್, ಕಾಂತೇಶ್, ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಧರ್ಮರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಅನ್ನಸಂತರ್ಪಣೆ ನಡೆಯಿತು. ಉದ್ಯಮಿ ಮಂಚೇಗೌಡ, ಟಿ.ಎ.ಮದೀಶ್, ಜೆ.ಎಸ್.ರಘು, ಸುಧೀರ್ ಇತರರಿದ್ದರು.