ಚಿತ್ರದುರ್ಗ:ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಿಸಲು ನಿರ್ಭಯ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿರುವ 23 ಬೈಕ್‌ಗಳನ್ನು ಮಂಗಳವಾರ ಆಯಾ ಠಾಣೆಗಳಿಗೆ ಹಂಚಿಕೆ ಮಾಡಲಾಯಿತು. ನಗರದ ಡಿಎಆರ್ ಮೈದಾನದಲ್ಲಿ ನಡೆದ ಕಾರ‌್ಯಕ್ರಮದಲ್ಲಿ ಮಹಿಳಾ ಸಹಾಯವಾಣಿ ಇರುವಂಥ ಜಿಲ್ಲೆಯ 21 ಕಾನೂನು ಸುವ್ಯವಸ್ಥೆ ಠಾಣೆಗಳಿಗೆ ಹಾಗೂ ಮಾನವ ಕಳ್ಳ ಸಾಗಣಿಕೆ ನಿಷೇಧ ಠಾಣೆ ಎಂದು ಹೊಸದಾಗಿ ಗುರುತಿಸಿರುವ ಮಹಿಳಾ ಠಾಣೆಗೆ ಎರಡು ಬೈಕ್‌ಗಳು ಮಂಜೂರಾಗಿವೆ.
ಬೈಕ್ ವಿತರಿಸಿ ಹಾಗೂ ನಗರದಲ್ಲಿ ನಡೆದ ಈ ಬೈಕ್‌ಗಳ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಎಸ್ಪಿ ಜಿ.ರಾಧಿಕಾ, ದೌರ್ಜನ್ಯಗಳ ಹತೋಟಿಗೆ ಬೈಕ್‌ಗಳ ಸಹಿತ ಈಗಾಗಲೇ ಒದಗಿಸಿರುವ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳು ವಂತೆ ಅಧಿಕಾರಿ-ಸಿಬ್ಬಂದಿಗೆ ತಾಕೀತು ಮಾಡಿದರು.
ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಓಬವ್ವ ಪಡೆ ಹಾಗೂ ಈ ಬೈಕ್‌ಗಳನೆರವಿನೊಂದಿಗೆ ಜಿಲ್ಲಾದ್ಯಂತ ಮಹಿಳೆ ಯರ ಚುಡಾಯಿಸುವಿಕೆ ಮೊದಲಾದ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ ಎಂದರು. ಎಎಸ್ಪಿ ಎಂ.ಬಿ.ನಂದಗಾವಿ,ಡಿವೈ ಎಸ್ಪಿಗಳಾದ ಕೆ.ವಿ.ಶ್ರೀಧರ್,ತಿಪ್ಪೇಸ್ವಾಮಿ,ಪಾಂಡುರಂಗ,ಸಿಪಿಐಗಳಾದ ಪ್ರಕಾಶ್,ಲಕ್ಷ್ಮಿಕಾಂತ್,ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹ ಮದ್,ಆರ್‌ಪಿಐ ಸೋಮಶೇಖರ್,ರುದ್ರೇಶ್ ಮತ್ತಿತರ ಅಧಿಕಾರಿಗಳು ಇದ್ದರು.