ನ್ಯೂಸ್

ದೋಷಾರೋಪ ಪಟ್ಟಿ ಸಲ್ಲಿಸುವಂತೆ ಒತ್ತಾಯ

ಬೆಳಗಾವಿ: ಭ್ರಷ್ಟಾಚಾರ, ಅಕ್ರಮ ಆಸ್ತಿ ಕಬಳಿಕೆ ಮಾಡಿರುವ ಪ್ರಕರಣಗಳು ದಾಖಲಾಗಿ ಹಲವು ವರ್ಷ ಕಳೆದರೂ ಭ್ರಷ್ಟಾಚಾರ ನಿಗ್ರಹ ದಳವು ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ದೋಷಾರೋಪ ಪಟ್ಟಿ ಸಲ್ಲಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾ ಅಧೀಕ್ಷಕರ ಕಚೇರಿಗೆ ಸೋಮವಾರ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಜಿಲ್ಲೆಯ ಕೆಲ ಪ್ರಕರಣಗಳಲ್ಲಿ 9 ವರ್ಷ ಕಳೆದರೂ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ದೂರು ಸಲ್ಲಿಸಿ ಆರು ತಿಂಗಳ ಒಳಗಾಗಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದ್ದ ಎಸಿಬಿ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುವವರಿಗೆ ರಕ್ಷಣೆ ನೀಡುತ್ತಿರುವುದು ದುರಂತ. ಒಂದು ವಾರದೊಳಗೆ 9 ವರ್ಷಗಳ ಭ್ರಷ್ಟಾಚಾರ ದೂರುಗಳಿಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಜಿಲ್ಲಾಧ್ಯಕ್ಣ ವಿಜಯ ಪಾಟೀಲ, ರಿಜ್ವಾನ್ ಮಕಾನದಾರ, ಬಶೀರ್‌ಅಹ್ಮದ್ ಜಮಾದಾರ, ಅನೀಸ್ ಸೌದಾಗರ, ಇಮ್ರಾನ್ ಜಮಾದಾರ, ಮಹಾವೀರ ಅನಗೋಳ ಇತರರಿದ್ದರು.