???????????????????????????????????? 
ನ್ಯೂಸ್

ದೇಸಿ ಕ್ರೀಡೆಗಳ ಆಯೋಜನೆಗೆ ಒತ್ತು ನೀಡಿ

ಹುಣಸೂರು: ದೇಸಿ ಕ್ರೀಡೆಗಳತ್ತ ಯುವಸಮೂಹ ಹೆಚ್ಚಿನ ಗಮನಹರಿಸುವ ಮೂಲಕ ಈ ನೆಲದ ಆಟೋಟಗಳನ್ನು ಉಳಿಸಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.


ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಸ್ನೇಹ, ಉತ್ತಮ ಬಾಂಧವ್ಯ ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕ್ರಿಕೆಟ್ ಕ್ರೀಡೆಯನ್ನು ಸರ್ವೇ ಸಾಮಾನ್ಯವಾಗಿ ಆಡುತ್ತಿದ್ದೇವೆ. ಆದರೆ, ಈ ನೆಲದ ಪರಂಪರೆಯ ಕೊಂಡಿಗಳಾದ ಲಗೋರಿ, ಚಿನ್ನಿದಾಂಡು, ಖೋ ಖೋ, ಕಬಡ್ಡಿಯಂತಹ ಕ್ರೀಡೆಗಳಿಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.


ಛಾಯಾಗ್ರಾಹಕ ಸಂಘ ನಿರ್ಮಿಸಿರುವ ಆಕರ್ಷಕ ತೇಗದ ಮರದಿಂದ ತಯಾರಿಸಿದ ಟ್ರೋಫಿಯನ್ನು ಶಾಸಕ ಎಚ್.ಪಿ.ಮಂಜುನಾಥ್ ಅನಾವರಣಗೊಳಿಸಿದರು. ಸಂಘದ ಅಧ್ಯಕ್ಷ ರಾಮಸ್ವಾಮಿ, ಗೌರವಾಧ್ಯಕ್ಷ ಕ್ಸೇವಿಯರ್, ಜಿಲ್ಲಾಧ್ಯಕ್ಷ ದಡದಹಳ್ಳಿ ಮಹೇಶ್, ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್ ಇತರರು ಇದ್ದರು.