ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗವಿರುವ ನಾಗರಿಕ ವೇದಿಕೆ ಕಚೇರಿಯ ಮುಂಭಾಗ ಆಯೋಜಿಸಿದ್ದ 79ನೇ ಸ್ವಾತಂತ್ರೊೃೀತ್ಸವದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ತೋಟಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು ಪ್ರತಿದಿನವೂ ಆಚರಿಸುವಂತೆ ಆಗಬೇಕು. ಇದರಿಂದ ದೇಶಾಭಿಮಾನ ಹೆಚ್ಚಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಎನ್.ಡಿ. ಶಿವಪ್ಪ ಮಾತನಾಡಿದರು. ಹೋಬಳಿ ಕೇಂದ್ರದ ಜಾಥಾದಲ್ಲಿ ಎಲ್ಲ ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ನಾಗರಿಕ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಿಹಿ ವಿತರಣೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಎನ್.ಆರ್.ಸತೀಶ್, ಕಾರ್ಯದರ್ಶಿ ರುದ್ರಸ್ವಾಮಿ ಆರ್, ಖಜಾಂಚಿ ಜಗನ್ನಾಥ್, ಸದಸ್ಯರಾದ ಎನ್. ಎಂ. ನಾಗರಾಜ್, ಪಟೇಲ್ ಮುನ್ನ, ಸುಂದರಮೂರ್ತಿ, ಪ್ರಸನ್ನ ಕೇಶವಾಚಾರ್ಯ, ಶಿವ ಸ್ವಾಮಿ, ಡೇರಿ ಗೋಪಿ, ಕಿರಣ್ ಗವಿರಂಗಯ್ಯ, ಪ್ರಮುಖರಾದ ಪೊಲೀಸ್ ಬೆಟ್ಟಯ್ಯ, ತ್ರಿಣೇಶ್, ರಂಗಸ್ವಾಮಿ, ಶಂಕರ್, ಚಂದ್ರು ಯಾದವ್ ಹಾಜರಿದ್ದರು.