-ಕುತೂಗೋಡು ಗ್ರಾಪಂ ವ್ಯಾಪ್ತಿಯ ವೈಕುಂಠಪುರ ಅಗ್ರಹಾರದ ದುರ್ಗಾಂಬಾ ದೇವಾಲಯದಲ್ಲಿ ದೇಶದ ಶ್ರೇಯಸ್ಸಿಗಾಗಿ ಮನ್ಯುಸೂಕ್ತ ಹೋಮ ನೆರವೇರಿಸಲಾಯಿತು. ಕುಮಾರ್ ಭಟ್, ಶ್ರೀಕರ, ರಮೇಶ್, ನಂದಕುಮಾರ್ ಇದ್ದರು. 
ನ್ಯೂಸ್

ದೇಶದ ಶ್ರೇಯಸ್ಸಿಗಾಗಿ ಹೋಮ

ಶೃಂಗೇರಿ: ಕುತೂಗೋಡು ಗ್ರಾಪಂ ವ್ಯಾಪ್ತಿಯ ವೈಕುಂಠಪುರ ಅಗ್ರಹಾರದ ದುರ್ಗಾಂಬಾ ದೇವಾಲಯದಲ್ಲಿ ದೇಶದ ಶ್ರೇಯಸ್ಸಿಗಾಗಿ ಸೋಮವಾರ ಮನ್ಯುಸೂಕ್ತ ಹೋಮ ನೆರವೇರಿಸಲಾಯಿತು. ಗ್ರಾಪಂ ಸದಸ್ಯ ಕುಮಾರ್‌ಭಟ್ ಮಾತನಾಡಿ, ಭಾರತಕ್ಕೆ ಪಾರಂಪರಿಕವಾದ ಮೌಲ್ಯವಿದೆ. ಇಲ್ಲಿನ ಸನಾತನ ಧರ್ಮಕ್ಕೆ ಪ್ರಾಚೀನ ಹಿನ್ನೆಲೆ ಇದೆ. ಸಂಸ್ಕೃತಿ, ಸಂಸ್ಕಾರಕ್ಕೆ ಆದ್ಯತೆ ನೀಡಿ ಹಿರಿಯರ ಮೌಲ್ಯಗಳನ್ನು ಗೌರವಿಸುವ ದೇಶ ನಮ್ಮದು. ಜಗತ್ತು ಭಾರತದ ಪರಂಪರೆೆ, ಇಲ್ಲಿನ ಮಾನವೀಯ ಮೌಲ್ಯಗಳಿಗೆ ತಲೆಬಾಗುತ್ತಿದೆ. ನಮ್ಮ ದೇಶಕ್ಕೆ ಶತ್ರುಗಳಿಂದ ಯಾವುದೇ ತೊಂದರೆಯಾಗದಿರಲಿ ಎಂಬ ಹಿತದೃಷ್ಟಿಯಿಂದ ಹೋಮವನ್ನು ಸ್ಥಳೀಯರು ಒಗ್ಗೂಡಿ ನೆರವೇರಿಸಿದ್ದಾರೆ ಎಂದರು. ಶ್ರೀ ಮುರಳೀಕೃಷ್ಣ ಭಟ್, ನಂದಕುಮಾರ್ ಭಟ್, ಕೃಷ್ಣಭಟ್, ರಮೇಶ್ ಭಟ್, ಸೂರ್ಯನಾರಾಯಣ ಭಟ್, ಶ್ರೀಕರ, ರಮೇಶ್ ಉಪಸ್ಥಿತರಿದ್ದರು.