ನ್ಯೂಸ್

ದೇಶ- ವಿದೇಶಗಳಲ್ಲಿ ನಂದಿನಿ ಬ್ರಾಂಡ್ ಖ್ಯಾತಿ: ಭೀಮಾನಾಯ್ಕ

ಹೂವಿನಹಡಗಲಿ: ರಾಜ್ಯದಲ್ಲಿ ನಂದಿನಿ ಹಾಲಿನ ಬ್ರಾಂಡ್ ಉತ್ತಮ ಗುಣ ಮಟ್ಟದ ಹಾಲನ್ನು ಗ್ರಾಹಕರಿಗೆ ನೀಡುತ್ತಿದ್ದು. ರಾಜ್ಯದ ರೈತರು ಖಾಸಗಿ ಡೈರಿಗಳಿಗೆ ಹಾಲನ್ನು ನೀಡಲು ಮುಂದಾಗದೆ ನಂದಿ ಹಾಲಿನ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದರು.

ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಹಾಲುಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಮ್ಮ ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿ ಪ್ರತಿ ವರ್ಷ ಲಾಭದಲ್ಲಿದ್ದು ಬಂದಿರುವ ಲಾಭವನ್ನು ನಮ್ಮ ರೈತರಿಗೆ ನೇರವಾಗಿ ಬೋನಸ್ ರೂಪದಲ್ಲಿ ಹಣ ನೀಡಲಾಗುವುದು. ಬದಲಾಗಿ ನಮ್ಮ ಮಹಾ ಮಂಡಳಿ ಯಾವುದೇ ಕಾರಣಕ್ಕೂ ಸ್ವಂತಕ್ಕೆ ಹಣ ಖರ್ಚು ಮಾಡಲಾರದು. ಹಾಲನ್ನು ರೈತರಿಂದ ಪಡೆದುಕೊಂಡ ಮಾರಾಟ ಮಾಡಲಾಗುತ್ತಿದ್ದು. ಹಾಲಿನ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜೀ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ ೧೪ ಹಾಲು ಉತ್ಪಾದಕರ ಮಹಾ ಒಕ್ಕೂಟಗಳಿದ್ದು ಅವುಗಳಲ್ಲಿ ಸುಮಾರು ೨೬ ರಿಂದ ೨೭ ಲಕ್ಷ ಹಾಲು ಉತ್ಪಾದಕರಿದ್ದಾರೆ. ಹಾಲಿನ ಉತ್ಪಾದನೆಯಲ್ಲಿ ನಮ್ಮ ಹಾಲು ಉತ್ಪಾದನಾ ಒಕ್ಕೂಟ ಕ್ರಮೇಣವಾಗಿ ಹೆಚ್ಚಾಗುತ್ತಾ ಹೋಗಿದ್ದು ಪ್ರಸ್ತುತ ಸುಮಾರು ೮೭ ಲಕ್ಷ ಲೀಟರ್ ಉತ್ಪಾದನೆ ಮಾಡುತ್ತಿದ್ದೇವೆ.

ನಮ್ಮ ಮಹಾಮಂಡಳದ ರೈತರು ಉತ್ಪಾದನೆ ಮಾಡುವ ರಾಜ್ಯದ ಒಟ್ಟು ಭಾಗದಲ್ಲಿ ಶೇ.೫೦ ಉತ್ಪದನೆಯನ್ನು ಹೂವಿನಹಡಗಲಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕಿನಿಂದ ಬರುತ್ತದೆ. ಕಾರಣ ಮುಂದಿನ ದಿನಗಳಲ್ಲಿ ನಮ್ಮ ವಿಜಯನಗರ ಜಿಲ್ಲೆಯ ಈ ತಾಲೂಕಿನಲ್ಲಿ ವಿಶೇಷವಾದ ಒಂದು ಪ್ರಾಜೆಕ್ಟ ರೂಪಿಸುವ ಯೋಜನೆ ಇರುವುದಾಗಿ ತಿಳಿಸಿದರು. ಹಾಲಿನಲ್ಲಿ ಕೆಮಿಕಲ್ ಮಿಶ್ರಣದ ಬಗ್ಗೆ ಗ್ರಾಹಕರು ಹೆಚ್ಚರಿಕೆ ವಹಿಸಬೇಕು. ಕಡಿಮೆ ಬೆಲೆಯಲ್ಲಿ ಉತ್ತಮ ಗುಣ ಮಟ್ಟದ ಹಾಲನ್ನು ನೀಡುತ್ತಿರುವ ನಮ್ಮ ರೈತರ ಬ್ರಾಂಡ್ ಆಗಿರುವ ನಂದಿನಿ ಬ್ರಾಂಡ್ ರಾಜ್ಯ, ದೇಶದಲ್ಲಿ ಮಾತ್ರ ಅಲ್ಲ ವಿದೇಶದಲ್ಲಿಯೂ ಸಹ ಪ್ರಸಿದ್ದಿ ಪಡೆದಿದೆ ಎಂದರು. ಶಾಸಕ ಕೃಷ್ಣನಾಯ್ಕ ಮಾತನಾಡಿ, ಹಾಲು ಉತ್ಪಾದಕ ಸಂಘಗಳು ರೈತರು ಸಂಕಷ್ಟದಲ್ಲಿದ್ದಾಗ ಆರ್ಥಿಕ ಸಹಾಯ ರೂಪದಲ್ಲಿ ಕೆಲಸ ಮಾಡುತ್ತಿವೆ ಎಂದರು.

ಶಾಸಕ ಕೃಷ್ಣನಾಯ್ಕ, ಗವಿಮಠದ ಡಾ.ಹಿರಿಶಾಂತವೀರ ಮಹಾಸ್ವಾಮಿಜಿ, ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಐಗೋಳ್ ಚಿದಾನಂದ್, ಗವಿಮಠದ ಡಾ.ಹಿರಿಶಾಂತವೀರ ಮಹಾಸ್ವಾಮಿಜಿ, ರಾ.ಬ.ಕೋ ಒಕ್ಕೂಟದ ಉಪಾಧ್ಯಕ್ಷ ರವೀಂಧ್ರ, ನಿರ್ದೆಶಕ ಎಚ್.ಕಾಂತಪ್ಪ, ಶಿವಪ್ಪ ವಾದಿ, ಜಿ.ಕವಿತಾ, ಗ್ರಾ.ಪಂ. ಅಧ್ಯಕ್ಷ ಎಂ.ಅAಜಿನೆಪ್ಪ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ತೊಳಲಿ ಮಲ್ಲನಗೌಡ್ ಹಾಗೂ ಇತರರಿದ್ದರು.