ಮೈಸೂರು ದಸರೆಗೆ ಆಗಮಿಸುವ ದೇಶ- ವಿದೇಶಗಳ ಪ್ರವಾಸಿಗರಿಗೆ ಇಲ್ಲಿನ ಸಂಸ್ಕೃತಿ ಬಿಂಬಿಸುವ ಸಲುವಾಗಿ ನಗರದ ಅರಮನೆ ಆವರಣದಲ್ಲಿ ಭಾನುವಾರ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಜನನಿ ಸೇವಾ ಟ್ರಸ್ಟ್‌ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸಿಗರಿಗೆ ಮೈಸೂರು ಪೇಟ ತೊಡಿಸಿ ನಂಜನಗೂಡು ರಸಬಾಳೆ, ಮೈಸೂರು ಚಿಗುರು ವಿಳ್ಯೆದೆಲೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ ಹೂವು ನೀಡಿ, ಮಹಿಳೆಯರಿಗೆ ಒಳ ತೊಡಿಸಿ, ಸುಗಂಧದ್ರವ್ಯ ಸಿಂಪಡಿಸಿ, ಆರತಿ ಮಾಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಅರಮನೆಯ ವರಾಹ ದ್ವಾರದಿಂದ ಟಿಕೆಟ್‌ಪಡೆದು, ಅರಮನೆಗೆ ಹೊರಟಿದ್ದ ದೇಶ- ವಿದೇಶಗಳ ಪ್ರವಾಸಿಗರನ್ನು ಟ್ರಸ್ಟಿನ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ಅಲ್ಲಿ ಹಾಕಿದ್ದ ಕುರ್ಚಿಗಳ ಮೇಲೆ ಕೂರುವಂತೆ ಕೋರಿದಾಗ ಅವರಿಗೆ ಆಶ್ಚರ್ಯವಾಯಿತು. ಆಗ ಅವರಿಗೆ ಮೈಸೂರು ದಸರೆ ಆರಂಭವಾಗುವ ಮುನ್ನಾ ಪ್ರತಿವರ್ಷ ಈ ರೀತಿಯ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದಾಗ ಖುಷಿ ಪಟ್ಟರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, 'ಅಂಬಾರಿ ಆನೆ' 'ಅಭಿಮನ್ಯು' ಮಾವುತ ವಸಂತ, ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಕೆ. ಅಶೋಕ್, ಉಪಾಧ್ಯಕ್ಷ ಸದಾಶಿವಣ್ಣ, ಪ್ರಧಾನ ಕಾರ್ಯದರ್ಶಿ ಆರ್. ಸೌಮ್ಯಾ, ಕಾಂಗ್ರೆಸ್ ಮುಖಂಡರಾದ ಸಿ.ಎಸ್. ರಘು, ದೇವರಾಜ ಮೊಹಲ್ಲಾ ಹರೀಶ್‌ಗೌಡ, ಸಮಾಜ ಸೇವಕ ವಿಕ್ರಂ ಅಯ್ಯಂಗಾರ್ ಮೊದಲಾದವರು ಇದ್ದರು.