ಹವ್ವಳ್ಳಿ ಗ್ರಾಮದ ಗ್ರಾಮ ದೇವತೆ ಸಬಲಮ್ಮ ದೇವಿ ದೇವಸ್ಥಾನದ ಬಳಿ ಗ್ರಾಮಸ್ಥರು ಪಂಜಿನ ದೀಪಗಳನ್ನು ಹಚ್ಚಿದರು.  
ನ್ಯೂಸ್

ದೇವೀರಮ್ಮ ದೇವಿಗೆ ತಂಬಿಟ್ಟಿನ ಆರತಿ

ಆಲ್ದೂರು: ಪಟ್ಟಣದಲ್ಲಿ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು. ಗುರುವಾರ ಬೆಟ್ಟದ ತಾಯಿ ದೇವೀರಮ್ಮ ದೇವಿಗೆ ತಂಬಿಟ್ಟಿನ ಆರತಿ ಬೆಳಗಲಾಯಿತು. ಶುಕ್ರವಾರ ಲಕ್ಷ್ಮೀಪೂಜೆ, ಶನಿವಾರ ದೀಪಾವಳಿ ಹಬ್ಬ ಹಾಗೂ ಗೋಪೂಜೆ ನೆರವೇರಿಸಲಾಯಿತು.

ದೀಪಾವಳಿ ಹಬ್ಬದ ದಿನ ಮಲೆನಾಡಿನಲ್ಲಿ ಪಂಜು ಹಚ್ಚುವ ಪದ್ಧತಿ ಇದೆ. ಜನರು ಹರಳಿನ ಕಡ್ಡಿಗಳಿಂದ ಪಂಜು ತಯಾರಿಸಿ ಮನೆ, ದೇವಸ್ಥಾನ, ಅಂಗಡಿಗಳು, ಜಮೀನಿನ ಬಳಿ ಹಚ್ಚಿದರು. ಆಲ್ದೂರಿನ ಮಹಾಗಣಪತಿ ದೇವಸ್ಥಾನ, ಹವ್ವಳ್ಳಿ ಅಮೃತೇಶ್ವರ ಸ್ವಾಮಿ, ದೊಡ್ಡಮಾಗರವಳ್ಳಿ ಸುಗ್ಗಿ ಕಟ್ಟೆ , ಹೊಸಳ್ಳಿ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಬಳಿ ಗ್ರಾಮಸ್ಥರು ಪಂಜು ಹಚ್ಚಿ ಸುಖ, ಶಾಂತಿ, ಸಮೃದ್ಧಿ ದೊರೆಯಲೆಂದು ಪ್ರಾರ್ಥಿಸಿದರು.