ಬೆಟ್ಟದಪುರದ ಗ್ರಾಮದೇವತೆ ಶ್ರೀ ಶಾಂತವೀರಮ್ಮ ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದರು.  
ನ್ಯೂಸ್

ದೇವಸ್ಥಾನದ ಹುಂಡಿ ಒಡೆದ ಕಳ್ಳರು

ಬೆಟ್ಟದಪುರ: ಬೆಟ್ಟದಪುರದ ಗ್ರಾಮದೇವತೆ ಶ್ರೀ ಶಾಂತವೀರಮ್ಮ ದೇವಾಲಯದಲ್ಲಿ ಮಂಗಳವಾರ ರಾತ್ರಿ ಕಳ್ಳರು ಹುಂಡಿ ಒಡೆದು ಹಣ ದೋಚಿದ್ದಾರೆ.

ದೇವಸ್ಥಾನಕ್ಕೆ ಮಂಗಳವಾರ ಮಧ್ಯರಾತ್ರಿ ಇಬ್ಬರು ಕಳ್ಳರು ಬಂದಿರುವುದು ದೇವಸ್ಥಾನ ಸಮೀಪದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು. ಕಳ್ಳರು ಯಾರೆಂದು ಪತ್ತೆಯಾಗಿಲ್ಲ. ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಆಗಮಿಸಿದ ಬೆಟ್ಟದಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎಂ. ಯತ್ತಿನಮನಿ ನೇತೃತ್ವದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದರು. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆಬಿಸಿದ್ದಾರೆ.