ಮಲ್ಲಾಪುರದಲ್ಲಿ ದೇವಸ್ಥಾನದ ರಸ್ತೆಗೆ ಅಳವಡಿಸಿದ ನೂತನ ಬೀದಿ ದೀಪಗಳನ್ನು ಗ್ರಾಪಂ ಸದಸ್ಯ ಪರಮೇಶ್ವರಪ್ಪ ಉದ್ಘಾಟಿಸಿದರು. ಬಸವರಾಜ್, ಜಯಪ್ಪ, ಸದಾಶಿವಪ್ಪ ಗೌಡ ಇತರರಿದ್ದಾರೆ. 
ನ್ಯೂಸ್

ದೇವಸ್ಥಾನ ರಸ್ತೆಗೆ ವಿದ್ಯುತ್ ದೀಪ ಅಳವಡಿಕೆ

ಹೊಳೆಹೊನ್ನೂರು: ದೇವಸ್ಥಾನದ ರಸ್ತೆಗೆ ಬೀದಿ ದೀಪ ಅಳವಡಿಸುವ ಮೂಲಕ ಗ್ರಾಮಸ್ಥರ ಹಲವು ವರ್ಷದ ಬೇಡಿಕೆ ಈಡೇರಿದೆ ಎಂದು ಗ್ರಾಪಂ ಸದಸ್ಯ ಮೂಡ್ಲೇರ್ ಪರಮೇಶ್ವರಪ್ಪ ಹೇಳಿದರು.

ಸಮೀಪದ ಮಲ್ಲಾಪುರದಲ್ಲಿ ಸೋಮವಾರ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆಗೆ ಗ್ರಾಪಂ ಸಹಯೋಗದಲ್ಲಿ ಅಳವಡಿಸಿದ ನೂತನ ಬೀದಿ ದೀಪಗಳನ್ನು ಬೆಳಗಿಸಿ ಮಾತನಾಡಿದರು.

ಗ್ರಾಪಂ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಹಿಂದೆ ಸಂಜೆ ವೇಳೆ ದೇವಸ್ಥಾನಕ್ಕೆ ಹೋಗುವುದಕ್ಕೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆ ಮನಗಂಡು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಅವಧಿ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಗ್ರಾಮಗಳಲ್ಲಿ ಅತಿ ಅವಶ್ಯವಿರುವ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸಲಾಗುತ್ತಿದೆ. ಜಲ ಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಂತೆ ಮಲ್ಲಾಪುರ ಕೆಕೆ ರಸ್ತೆಯಿಂದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ದೇವಸ್ಥಾನದ ಹಿಂಭಾಗದ ಗುಡ್ಡದಲ್ಲಿನ ಸ್ವಾಮಿಯ ಪಾದಗಟ್ಟಿ ಸ್ಥಳಕ್ಕೆ ರಸ್ತೆ ನಿರ್ಮಾಣ ಸೇರಿ ಕಟ್ಟಡ ಕಾಮಗಾರಿ ಬಾಕಿ ಇದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಗ್ರಾಪಂ ಸಹಯೋಗದಲ್ಲಿ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಗೀತಮ್ಮ, ಗ್ರಾಮದ ಮುಖಂಡ ಬಾಳೋಜಿ ಬಸವರಾವ್, ಜಯಪ್ಪ, ಸದಾಶಿವಪ್ಪ ಗೌಡ, ರಂಗೋಜಿರಾವ್, ಈಶ್ವರ ರಾವ್, ಮಲ್ಲೇಶಪ್ಪ, ಸುರೇಶ್, ರಾಮರಾವ್, ರುದ್ರೇಶಪ್ಪ, ಮಂಜಪ್ಪ, ರಾಮಣ್ಣ, ವಿಶಾಲಾಕ್ಷಮ್ಮ, ವಿನೋದಮ್ಮ, ರಾಮು, ಲಕ್ಷ್ಮೀಕಾಂತ ಇತರರಿದ್ದರು.