ಹನಗೋಡು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನ ಪರಿಷತ್ ಸದಸ್ಯ ಎಚ್ . ವಿಶ್ವನಾಥ್ ಅವರು ಅರಸು ಸಮಾಧಿಗೆ ಮಾಲಾರ್ಪಣೆ ಮಾಡಿದರು.
ಹೋಬಳಿಯ ಅರಸು ಕಲ್ಲಹಳ್ಳಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ದೇವರಾಜ ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತರು ಭೂಮಿಯ ಒಡೆಯರಾಗಿದ್ದರೆ ಅದು ದೇವರಾಜ ಅರಸು ಅವರ ಯೋಜನೆಗಳೇ ಕಾರಣ. ಅವರ ಕಾಲಘಟ್ಟದಲ್ಲಿ ಜಾರಿಗೆ ಬಂದ ಕೃಷಿ ಕ್ಷೇತ್ರ, ಭೂ ಸುಧಾರಣೆ ಕಾನೂನು ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮಹೇಶ್, ಜಿಪಂ ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ಕೆಪಿಸಿಸಿ ಸದಸ್ಯ ನಟೇಶ್‌ಗೌಡ, ಮುಖಂಡರಾದ ಚಿಲ್ಕುಂದ ನಾಗರಾಜ್, ಬಸವಣ್ಣ, ವೀರತಪ್ಪ, ವಿನೋಬ ಕಾಲನಿ ಗಣೇಶ್ ಇದ್ದರು.