ನಂಜನಗೂಡು: ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಿ.ಮಂಜು ಹಾಗೂ ಉಪಾಧ್ಯಕ್ಷರಾಗಿ ಶಶಿಕಲಾ ನಾಗೇಂದ್ರ ಆಯ್ಕೆಯಾದರು.
19 ಸದಸ್ಯರ ಬಲವಿರುವ ಪಂಚಾಯಿತಿಗೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಮಂಜು 15 ಮತ ಪಡೆದರೆ, ಪ್ರತಿಸ್ಪರ್ಧಿ ರೇಖಾ ನಾಲ್ಕು ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿಕಲಾ ನಾಗೇಂದ್ರ 13 ಮತ ಪಡೆದರೆ, ಪಾರ್ವತಮ್ಮ 6 ಮತ ಪಡೆದರು. ಚುನಾವಣಾಧಿಕಾರಿಯಾಗಿ ಮಂಜುಳಾ ಕಾರ್ಯ ನಿರ್ವಹಿಸಿದರು.
ತಾಪಂ ಮಾಜಿ ಸದಸ್ಯ ಸಿ.ಎಂ.ಮಹದೇವಯ್ಯ, ಗ್ರಾಪಂ ಸದಸ್ಯರಾದ ಅವಿನಾಶ್, ರವಿ, ಪದ್ಮಮ್ಮ, ಭಾಗ್ಯಮ್ಮ, ಮಂಜುಳಾ, ಮಲ್ಲೇಶ್, ಸೌಮ್ಯ, ನಾಗೇಂದ್ರ, ಬಿಜೆಪಿ ಮುಖಂಡರಾದ ರಂಗನಾಥ್, ರಾಜಪ್ಪ, ಶಾಂತಪ್ಪ, ಪರಶಿವಪ್ಪ, ಗಣೇಶ್, ಶಿವಮಾದಪ್ಪ ಮುಂತಾದವರು ಉಪಸ್ಥಿತರಿದ್ದರು.