ನ್ಯೂಸ್

ದುರ್ಗದಲ್ಲಿ ಕಿಡಿಗೇಡಿಗಳಿಂದ ಪ್ಯಾಲೆಸ್ಟೈನ್ ಜಿಂದಾಬಾದ್ ಘೋಷಣೆ

ಚಿತ್ರದುರ್ಗ: ಈದ್ ಮಿಲಾದ್ ಹಬ್ಬದ ಅಂಗವಾಗಿ ಸೋಮವಾರ ನಗರದ ಗಾಂಧಿ ವೃತ್ತದ ಬಳಿ ಮೆರವಣಿಗೆ ಸಾಗುವ ವೇಳೆ ಕಿಡಿಗೇಡಿಗಳು ಪ್ಯಾಲೆಸ್ಟೈನ್ ಧ್ವಜ ಕೈಯಲ್ಲಿಡಿದು ಘೋಷಣೆ ಕೂಗಿದರು. ಕೆಲವರು ಪ್ಯಾಲೆಸ್ಟೈನ್ ಜಿಂದಾಬಾದ್ ಎಂದು ದನಿಗೂಡಿಸಿದರು.

ಸ್ಥಳದಲ್ಲಿದ್ದ ಪೊಲೀಸರು ಶಾಂತಿ-ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಕ್ಷಣ ಬಾವುಟವೊಂದನ್ನು ವಶಕ್ಕೆ ಪಡೆದರು. ಈ ಕುರಿತು ಪರಿಶೀಲಿಸಿ ಪ್ರಕರಣ ದಾಖಲಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.