ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಮುರುಘಾ ಮಠದ ಅನುಭವ ಮಂಟಪದಲ್ಲಿ ಜ.18 ರಿಂದ 2 ದಿನಗಳ ಕಾಲ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ರಂದು ಬೆಳಗ್ಗೆ 11 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಮ್ಮೇಳನಾಧ್ಯಕ್ಷ ಡಾ.ಸಿದ್ದರಾಮ ಬೆಲ್ದಾಳ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡುವರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ.ಎಸ್.ಆರ್.ಗುಂಜಾಳ, ಸಚಿವರಾದ ಎಂ.ಬಿ.ಪಾಟೀಲ್, ಡಿ.ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಗೋವಿಂದ ಎಂ.ಕಾರಜೋಳ, ಬಿ.ವೈ.ರಾಘವೇಂದ್ರ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಎಂಎಲ್‌ಸಿ ಕೆ.ಎಸ್.ನವೀನ್ ಸಿರಿಧಾನ್ಯ ಪ್ರದರ್ಶನ, ಶಾಸಕ ಎನ್.ವೈ. ಗೋಪಾಲಕೃಷ್ಣ ಚಿತ್ರಕಲಾ ಮಳಿಗೆ ಉದ್ಘಾಟಿಸು ವರು. ನಾಡೋಜ ಗೊ.ರು.ಚನ್ನಬಸಪ್ಪ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಅಂದು ಬೆಳಗ್ಗೆ 8.30 ಕ್ಕೆ ಸುತ್ತೂರು ಶ್ರೀಗಳು ಹಾಗೂ ತೋಂಟದಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ, ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ ರಾಷ್ಟ್ರ ಧ್ವಜಾರೋಹಣ, ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಪರಿಷತ್ ಧ್ವಜಾರೋಹಣ ನೆರವೇರಿಸುವರು.
ಬೆಳಗ್ಗೆ 9.45 ಕ್ಕೆ ಶಿವಮೊಗ್ಗ ರಸ್ತೆಯಿಂದ ಅನುಭವ ಮಂಟಪದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಶ್ರೀ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ಸಮ್ಮುಖದಲ್ಲಿ ಡಿಸಿ ಟಿ.ವೆಂಕಟೇಶ್ ಮೆರವಣಿಗೆ ಉದ್ಘಾಟಿಸುವರು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ನಗರಸಭೆ ಅಧ್ಯಕ್ಷೆ ಸುಮಿತಾರಘು, ಬಿ.ಕಾಂತರಾಜ್, ಬಿ.ಟಿ.ಜಗದೀಶ್, ಬಿ. ಎ.ಲಿಂಗಾರೆಡ್ಡಿ, ಎಂ.ಸಿ. ರಘುಚಂದನ್, ಬಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿರುವರು.
ಅಂದು ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ, ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಹಾಗೂ ಶರಣ ಸಾಹಿ ತ್ಯದತ್ತ ಯುವಜನತೆ ಕುರಿತು ಚಿಂತನಾಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಮಲ್ಲಿಕಾರ್ಜುನ ಸ್ವಾಮೀ ಜಿ, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ವೇಮನಾನಂದ ಸ್ವಾಮೀಜಿ, ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತಿತರ ಗಣ್ಯರು ಗೋಷ್ಠಿಗಳಲ್ಲಿ ಉಪಸ್ಥಿತರಿರುವರು. ಸಂಜೆ 7 ಕ್ಕೆ ಡಾ.ಮುಖ್ಯಮಂತ್ರಿ ಚಂದ್ರು ಸಾಂಸ್ಕೃತಿಕ ಕಾರ‌್ಯಕ್ರಮ ಉದ್ಘಾಟಿಸುವರು. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಗುವುದು.
19 ರಂದು ಬೆಳಗ್ಗೆ 8.30 ಕ್ಕೆ ವಚನ ಗಮಕ ಸೌರಭ, 9 ಕ್ಕೆ ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ಪ್ರಾತಃಸ್ಮರಣೀಯರು ಚಿಂತನಗೋಷ್ಠಿಯಲ್ಲಿ ಶ್ರೀ ಜಯದೇವ ಶ್ರೀ, ಡಾ.ಫ.ಗು.ಹಳಕಟ್ಟಿ, ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಡಾ.ಶಿವಕುಮಾರ ಸ್ವಾಮೀ ಜಿ, ಸಿದ್ದೇಶ್ವರ ಶ್ರೀ ಹಾಗೂ ನಾಯಕಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಕುರಿತು ನಾನಾ ಪೂಜ್ಯರು, ಗಣ್ಯರು ಉಪನ್ಯಾಸ ನೀಡುವರು.
ಮಧ್ಯಾಹ್ನ 12.30 ರಿಂದ ಶರಣ ಸಾಹಿತ್ಯಾಧಾರಿತ ನಾಟಕಗಳು, ಆಧುನಿಕ ವಚನಗೋಷ್ಠಿ ಕುರಿತ ಚಿಂತನ ಗೋಷ್ಠಿಗಳ ಸಾನ್ನಿಧ್ಯವನ್ನು ಶ್ರೀ ಶಿವರುದ್ರ ಸ್ವಾಮೀಜಿ, ಡಾ.ಶರತ್‌ಚಂದ್ರ ಸ್ವಾಮೀಜಿ ವಹಿಸಲಿದ್ದಾರೆ. ನಾನಾ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ ಮತ್ತು ಸನ್ಮಾನ ಏರ್ಪಡಿಸಲಾಗಿದೆ.
ಸಂಜೆ 6 ಕ್ಕೆ ಸುತ್ತೂರು ಶ್ರೀಗಳು, ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ಏರ್ಪ ಸಿರುವ ಸಮಾರಂಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ ಸಮಾರೋಪ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ, ಕೆಎಲ್‌ಇ ಸಂಸ್ಥೆಯ ಡಾ.ಎಂ.ಪ್ರಭಾಕರ ಕೋರೆ ಪಾಲ್ಗೊಳ್ಳಲಿದ್ದಾರೆ.
ಗೊ.ರು.ಚನ್ನಬಸಪ್ಪ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಎಚ್.ಹನುಮಂತಪ್ಪ, ಮಾಜಿ ಸಚಿವ ಎಚ್.ಏಕಾಂತ ಯ್ಯ, ನಾಡೋಜ ಎಸ್.ಷಡಕ್ಷರಿ, ಡಾ.ಮೋಹನ್ ಆಳ್ವ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ವೀರೇಶ್ ವಿವರಿಸಿದರು.
ಪುರಪ್ರವೇಶ
ಸಮ್ಮೇಳನಾಧ್ಯಕ್ಷರು ಜ.17 ರಂದು ಸಂಜೆ 4 ಗಂಟೆಗೆ ಪುರ ಪ್ರವೇಶ ಮಾಡಲಿದ್ದಾರೆ. ರಂಗಯ್ಯನಬಾಗಿಲಿನಿಂದ ಅವರನ್ನು ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಕರೆದೊಯ್ಯಲಾಗುವುದು ಎಂದು ಡಾ.ಶ್ರೀಬಸವಕುಮಾರಸ್ವಾಮೀಜಿ ಹೇಳಿದರು.
ಎರಡು ದಿನಗಳ ಕಾಲ ನಾನಾ ರೂಪಕ ಸಹಿತ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅಂದಾಜು 15 ಸಾವಿರ ಜನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮುರುಘಾ ರಾಜೇಂದ್ರ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಕೆಇಬಿ ಷಣ್ಮುಖಪ್ಪ, ಕೆ.ಸಿ.ನಾಗರಾಜ್, ಪ್ರೊ.ಬಿ.ರಾಜಶೇಖರಪ್ಪ, ಷ ಡಕ್ಷರಯ್ಯ, ಶಶಿಧರಮೂರ್ತಿ, ಉಜ್ಜಿನಪ್ಪ, ಪ್ರೊ.ಎಂ.ಆರ್.ಜಯಲಕ್ಷ್ಮೀ, ಹುರುಳಿ ಬಸವರಾಜ್, ಕೆಪಿಎಂ ಗಣೇಶಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.