ದುಬೈ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬೈನಲ್ಲಿ 80 ಮಿಲಿಯನ್ ಡಾಲರ್ (639 ಕೋಟಿ ರೂ.) ಬೆಲೆಯ ದುಬಾರಿ ವಿಲ್ಲಾವನ್ನು ಖರೀದಿಸಿದ್ದಾರೆ.
ಪಾಮ್ ಜುಮೇರಾದಲ್ಲಿರುವ ಬೀಚ್ ಬಳಿಯ ಈ ವಿಲ್ಲಾವನ್ನು ಮುಕೇಶ್ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ಗಾಗಿ ಖರೀದಿಸಿದ್ದಾರೆ. ಈ ಕಡಲ ತೀರದ ಬಂಗಲೆಯು ಪಾಮ್ -ಆಕಾರದ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ.
10 ಮಲಗುವ ಕೊಠಡಿಗಳು, ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಪೂಲ್ಗಳಿವೆ ಎಂದು ಖರೀದಿ ವ್ಯವಹಾರದಲ್ಲಿ ಭಾಗಿಯಾಗಿದ್ದವರೊಬ್ಬರು ತಿಳಿಸಿದ್ದಾರೆ.